ಸುಬ್ರಹ್ಮಣ್ಯ ಭೇಟಿ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ರಾ ವಿಕ್ಕಿ, ಕತ್ರಿನಾ ಕೈಫ್ ಜೋಡಿ
ಕಳೆದ ಮೂರ್ನಾಲ್ಕು ದಿನಗಳಿಂದ ಕತ್ರಿನಾ ಕೈಫ್ ಗರ್ಭ ಧರಿಸಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಕತ್ರಿನಾ ಅವರು ನವೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ.
ವಿಕ್ಕಿ ಅಥವಾ ಕತ್ರಿನಾ ಅಂತಹ ಯಾವುದೇ ಗಾಸಿಪ್ ಅನ್ನು ಎಂದಿಗೂ ದೃಢಪಡಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ನಾಲ್ಕು ವರ್ಷಗಳಿಂದ ಒಂದೇ ರೀತಿಯ ಊಹಾಪೋಹಗಳು ಯಾವುದೇ ಆಧಾರವಿಲ್ಲದೆ ಪ್ರಸಾರವಾಗುತ್ತಿರುವುದನ್ನು ಗಮನಿಸಿದರೆ ಈ ಬಜ್ ನಿಜವಲ್ಲ ಎನ್ನಲಾಗಿದೆ.