ಬಾಲಿವುಡ್ ನಟಿ ಮನಿಷಾ ಕೋಯಿರಾಲಾ ಹಲವಾರು ಪಾತ್ರಗಳ ಮೂಲಕ ಅಭಿಮಾನಿಗಳ ಗುಂಡೆಯಲ್ಲಿ ನೆಲೆನಿಂತವರು. ಸೌದಾಗರ್, 1942 ಎ ಲವ್ ಸ್ಟೋರಿ, ಬಾಂಬೆ, ಅಕೇಲೆ ಹಮ್ ಅಕೇಲೆ ತುಮ್ ನಂತಹ ಚಿತ್ರಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯ ಮೆರೆದವರು.
ನಿಜಜೀವನದಲ್ಲಿ ತಾಯಿಯಾಗದಿದ್ದರೂ, ಹೆಣ್ಣುಮಗುವೊಂದನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವಿಷಯವನ್ನು ಮಾಧ್ಯಮಗಳ ಜತೆಗೆ ಮನೀಷಾ ಕೋಯಿರಾಲಾ ಹಂಚಿಕೊಂಡಿದ್ದಾರೆ ಸಹ. ಅಂಡಾಶಯದ ಕ್ಯಾನ್ಸರ್‌ಗೆ ಒಳಗಾಗಿದ್ದ ಮನೀಷಾ ಕೋಯಿರಾಲಾ, ಐದು ವರ್ಷಗಳ ಕಾಲ ಅದರಿಂದ ನರಳಿದ್ದರು. ಮಗುವನ್ನು ದತ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ಅವರು ತುಂಬಾ ಖುಷಿಯಿದೆ.