ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ನೇಹಾ ಧೂಪಿಯಾ

ಮಂಗಳವಾರ, 20 ನವೆಂಬರ್ 2018 (09:59 IST)
ಮುಂಬೈ : ಮೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ನೇಹಾ ಧುಪಿಯಾ ಭಾನುವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ಅಂಗದ್ ಬೇಡಿ ಜೊತೆ ಮೇ ತಿಂಗಳಲ್ಲಿ ಗುಟ್ಟಾಗಿ ನವದೆಹಲಿಯ ಗುರುದ್ವಾರದಲ್ಲಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

 

ಇದೀಗ ಮದುವೆಯಾಗಿ ಆರು ತಿಂಗಳಿಗೆ ನಟಿ ನೇಹಾ ಧುಪಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ನೇಹಾ ಹಾಗೂ ಅಂಗದ್ ಗೆಳತಿಯಾದ ಸೋಫಿ ಚೌಧರಿ ಅವರು, ನೇಹಾ ಅವರಿಗೆ ಹೆಣ್ಣು ಮಗು ಜನಿಸಿದೆ ಎಂದು ಮೊದಲು ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ