ಗೋವಾದಲ್ಲಿ ರಿಯಾ ಸೇನ್ ಬಿಕಿನಿ ಹಂಗಾಮ

ಸೋಮವಾರ, 6 ಫೆಬ್ರವರಿ 2017 (11:56 IST)
ನಟಿ ಮತ್ತು ರೂಪದರ್ಶಿ ರಿಯಾ ಸೇನ್ ಸಿನಿಮಾ ಕುಟುಂಬದಿಂದ ಬಂತಹರ ಬೆಡಗಿ. ಅವರ ಅಜ್ಜಿ ಸುಚಿತ್ರ ಸೇನ್, ತಾಯಿ ಮೂನ್ ಮೂನ್ ಸೇನ್ ಮತ್ತು ತಂಗಿ ರೈಮಾ ಸೇನ್ ಇವರೆಲ್ಲಾ ಸಿನಿಮದಲ್ಲಿ ತೊಡಗಿಕೊಂಡವರು. 1991ರಲ್ಲಿ ವಿಷಕನ್ಯ ಎಂಬ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳೆತೆರೆಗೆ ಅಡಿಯಿಟ್ಟ ಬೆಡಗಿ.
 
ಸದ್ಯಕ್ಕೆ ಈ ನಟಿ ಗೋವಾದಲ್ಲಿ ಗೆಳೆಯರ ಟೈಂಪಾಸ್ ಮಾಡುತ್ತಿದ್ದಾರೆ. ಅಲ್ಲಿ ಎಂಜಾಯ್ ಮಡುತ್ತಿರುವ ಫೋಟೋಗಳನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ ರಿಯಾ ಸೇನ್. ಬಿಕಿನಿಗೆ ಹೇಳಿ ಮಾಡಿಸಿದ ದೇಹಸಿರಿ ರಿಯಾ ಸೇನ್ ಅವರದು. 
 
ಒಟ್ನಲ್ಲಿ ಬಿಕಿನಿ ಮೂಲಕ ಪಡ್ಡೆಗಳ ಹೃದಯದಲ್ಲಿ ರಂಗೋಲಿ ಬಿಡಿಸಿದ್ದಾರೆ ರಿಯಾ ಸೇನ್. ಬೆಂಗಾಳಿಯ ಹೀರೋ 420 ಮತ್ತು ಡಾರ್ಕ್ ಚಾಕೊಲೇಟ್ ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ ರಿಯಾ ಕೈಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್‌ಗಳಿಲ್ಲ. ಹಾಗಾಗಿ ಈ ತುಂಡುಡೆ ಮೂಲಕ ಗಮನಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ