ನಟಿ ಶಿಲ್ಪಾ ಶೆಟ್ಟಿಗೆ ಸಿಡ್ನಿ ಏರ್ ಪೋರ್ಟ್ ನ ಸಿಬ್ಬಂದಿಯಿಂದ ಅವಮಾನ
ಮಂಗಳವಾರ, 25 ಸೆಪ್ಟಂಬರ್ 2018 (06:29 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬ್ಯಾಗ್ ವಿಚಾರಕ್ಕೆ ಸಿಡ್ನಿ ಏರ್ ಪೋರ್ಟ್ ನ ಸಿಬ್ಬಂದಿಯಿಂದ ಅವಮಾನವಾಗಿದೆಯಂತೆ. ಇನ್ನು ಈ ವಿಚಾರವನ್ನು ಅವರು ತಮ್ಮ ಇನ್ ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.
ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಆಸ್ಟ್ರೇಲಿಯಾಕ್ಕೆಪ್ರಯಾಣ ಬೆಳೆಸಿದ್ದರು. ಅಲ್ಲಿ ಚೆಕ್ ಇನ್ ಮಾಡುವ ಮಹಿಳಾ ಸಿಬ್ವಂದಿ ಬ್ಯಾಗ್ ಗಾತ್ರ ದೊಡ್ಡದಿದೆ ಎಂದು ಎರಡು ಬಾರಿ ಚೆಕ್ ಇನ್ ಗೆ ಕಳುಹಿಸಿದ್ದಾರಂತೆ. ನಾನು ಎಷ್ಟೇ ಬಾರಿ ಕೇಳಿದರೂ ಬಿಡದೆ ಅವಮಾನ ಮಾಡಿದ್ದಾರೆ ಎಂದು ನಟಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ನಂತರ ಹೋಗಿ ವಿನಂತಿ ಮಾಡಿ ಎಲ್ಲ ಸರಿ ಇದೆ ಅಂದ ಮೇಲೆ ಒಳಗೆ ಬಿಟ್ಟಿದ್ದಾರೆ. ಏರ್ಲೈನ್ಸ್ ಸಿಬ್ಬಂದಿಯ ಈ ವರ್ತನೆ ಬೇಸರ ವ್ಯಕ್ತಪಡಿಸಿರುವ ಶಿಲ್ಪಾ ಶೆಟ್ಟಿ ಇಲ್ಲಿ ವರ್ಣ ಬೇಧ ನೀತಿ ಇದೆ. ನಮ್ಮ ಮೈ ಬಣ್ಣ ಬೇರೆ ಅಂತಾ ಹೀಗೆ ಮಾಡಿದ್ದಾರೆ. ಕ್ವಾಂಟಾಸ್ ಏರ್ಲೈನ್ಸ್ ಇದನ್ನು ಗಂಭಿರವಾಗಿ ಪರಿಗಣಿಸಿಬೇಕು. ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅಂತಾ ಅವರಿಗೆ ಹೇಳಿಕೊಡಿ ಅಂತಾ ಬರೆದಿದ್ದಾರೆ. ಇನ್ನು ತಮ್ಮ ಬ್ಯಾಗ್ ಫೋಟೋ ಒಂದನ್ನು ಹಂಚಿಕೊಂಡು ಇದು ಓವರ್ ಸೈಜಾ ಅಂತಾ ಅಭಿಮಾನಿಗಳಲ್ಲಿ ಕೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.