ನಟಿ ಸೋನಾಲಿ ಬೇಂದ್ರೆ ನಿಧನ ; ಶಾಸಕ ರಾಮ್​ ಕದಂ ಎಡವಟ್ಟು ಟ್ವೀಟ್

ಶನಿವಾರ, 8 ಸೆಪ್ಟಂಬರ್ 2018 (06:58 IST)
ಮುಂಬೈ : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕವೇ ಸುದ್ದಿಯಾಗುವ ಬಿಜೆಪಿ ಶಾಸಕ ರಾಮ್ ಕದಂ ಅವರು ಇದೀಗ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ವಿಚಾರವೊಂದಕ್ಕೆ  ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.


ಹೌದು. ನಟಿ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ರೋಗದಿದ ಬಳಲುತ್ತಿದ್ದು, ಈಗ ಅದರ ಚಿಕಿತ್ಸೆಗಾಗಿ ನ್ಯೂಯಾರ್ಕ್ ನಲ್ಲಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಜೆಪಿ ಶಾಸಕ ರಾಮ್​ ಕದಂ​, ತಮ್ಮ ಟ್ವಿಟರ್​​ನಲ್ಲಿ ಮರಾಠಿ ಹಾಗೂ ಬಾಲಿವುಡ್​ ನಟಿ ಸೋನಾಲಿ ಬೇಂದ್ರೆ ಅಮೆರಿಕಾದಲ್ಲಿ ಸಾವನ್ನಪ್ಪಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಳ್ಳುವೆ ಎಂದು ಟ್ವೀಟ್​ ಮಾಡಿದ್ದರು.


ಅವರ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ನೆಟಿಜನ್ಸ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ತಪ್ಪಿನ ಅರಿವಾಗಿ ಟ್ವೀಟ್​ ಡಿಲೀಟ್​ ಮಾಡಿದ್ದು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ