ಗಂಡು ಮಗುವಿಗೆ ಜನ್ಮ ನೀಡಿದ ನಟ ಶಾಹಿದ್ ಪತ್ನಿ ಮೀರಾ ರಜಪೂತ್

ಗುರುವಾರ, 6 ಸೆಪ್ಟಂಬರ್ 2018 (13:41 IST)
ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಬುಧವಾರ ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


ಬುಧವಾರ ಸಂಜೆ ಮೀರಾ ತಮ್ಮ ತಾಯಿ ಬೆಲಾ ರಜಪೂತ್ ಜೊತೆ  ಆಸ್ಪತ್ರೆಗೆ ಆಗಮಿಸಿದ್ದಾಗ ಹೋಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂದೇ ಅವರಿಗೆ  ಹೆರಿಗೆಯಾಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


2015ರ ಜುಲೈ 6ರಂದು ವಿವಾಹವಾಗಿದ್ದ ಶಾಹಿದ್ ಮತ್ತು ಮೀರಾ ದಂತಿಗಳಿಗೆ ಈಗಾಗಲೇ ಮಿಶಾ ಎಂಬ 2 ವರ್ಷದ ಮಗಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ