ನಿಧಿ ಅಗರ್ವಾಲ್ - ಕ್ರಿಕೆಟಿಗ ರಾಹುಲ್ ಡೇಟಿಂಗ್ ಕುರಿತು ನಿಧಿ ಹೇಳಿದ್ದೇನು….?

ಶನಿವಾರ, 2 ಜೂನ್ 2018 (06:29 IST)
ಮುಂಬೈ : ನಟಿ ನಿಧಿ ಅಗರ್ವಾಲ್ ಹಾಗೂ ಕ್ರಿಕೆಟಿಗ ರಾಹುಲ್ ಅವರು ಜೊತೆಯಾಗಿ ರೆಸ್ಟಾರೆಂಟ್ ನಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇವರಿಬ್ಬರ ಕುರಿತಾಗಿ ರೂಮರ್ಸ್ ಒಂದು  ಕೇಳಿಬಂದಿತ್ತು. ಆದರೆ ಇದೀಗ ನಟಿ ನಿಧಿ ಅಗರ್ವಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ಈ ರೂಮರ್ಸ್ ಗೆ ತೆರೆ ಎಳೆದಿದ್ದಾರೆ.


ಇತ್ತೀಚೆಗೆ ನಟಿ ನಿಧಿ ಅಗರ್ವಾಲ್ ಅವರು ಕ್ರಿಕೆಟಿಗ ರಾಹುಲ್ ಅವರ ಜೊತೆ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು. ಇದನ್ನು ಗಮನಿಸಿದ ನಟಿ ನಿಧಿ ಅಗರ್ವಾಲ್ ಅವರು ಇದೀಗ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


‘ನಮ್ಮ ನಡುವೆ ಏನಿಲ್ಲ , ನಾನು ರಾಹುಲ್ ಒಳ್ಳೆಯ ಸ್ನೇಹಿತರು ಅಷ್ಟೇ. ರಾಹುಲ್ ಅವರೊಂದಿಗೆ ನಾನು ಔತಣಕೂಟಕ್ಕೆ ಹೋಗಿದ್ದು ನಿಜ. ರಾಹುಲ್ ಕ್ರಿಕೆಟಿಗನಾಗುವ ಮೊದಲು ಹಾಗೂ ನಾನು ನಟಿಯಾಗುವ ಮೊದಲೇ ನಮ್ಮ ಹದಿಹರೆಯದ ವರ್ಷಗಳಿಂದ ನಾವು ಪರಸ್ಪರ ತಿಳಿದಿದ್ದೇವೆ. ಒಂದೇ ಊರಿನ ಸ್ನೇಹಿತರು ಬೇರೆ ಊರಲ್ಲಿ ಭೇಟಿ ಮಾಡಿ ಮಾತನಾಡುವುದು ಸಂತಸ ನೀಡುತ್ತದೆ’ ಎಂದು ನಿಧಿ ಅಗರ್ವಾಲ್ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ