ಆದಾ ಶರ್ಮಾ ಅಮ್ಮನ ನೋಡಿದರೆ ಚಕಿತರಾಗುತ್ತೀರಿ

ಮಂಗಳವಾರ, 20 ಡಿಸೆಂಬರ್ 2016 (10:48 IST)
ನಟಿ ಆದಾ ಶರ್ಮಾ ಗೊತ್ತಲ್ಲಾ? ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ರಣವಿಕ್ರಮ ಚಿತ್ರದಲ್ಲಿ ಅಭಿನಯಿಸಿದ್ದ ಬೆಡಗಿ. ಅವರ ತಾಯಿ ಶೀಲಾ ವ್ಯಾಯಾಮ ಮಾಡುತ್ತಿರುವ ಶೈಲಿ ನೋಡಿ ಎಲ್ಲರೂ ಚಕಿತವಾಗಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಆದಾ ಶರ್ಮಾ ತಾಯಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
 
’ಸೋಮವಾರ ಬೆಳಗ್ಗೆ ವ್ಯಾಯಾಮ ಸ್ಫೂರ್ತಿ. ಮಲ್ಲಕಂಬದ ಮೇಲೆ ಅಮ್ಮ. ನಮ್ಮಮ್ಮ ತುಂಬಾ ಬಲಶಾಲಿ’ ಎಂದು ಟ್ವೀಟಿಸಿ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ವಿಡಿಯೋದಲ್ಲಿ ಮಲ್ಲಕಂಬದ ಮೇಲೆ ವಿವಿಧ ಭಂಗಿಗಳಲ್ಲಿ ವ್ಯಾಯಾಮ ಮಾಡುತ್ತಿರುವ ಸನ್ನಿವೇಶಗಳಿವೆ.
 
ಮಲ್ಲಕಂಬ ಮಾಡುವುದು ಸ್ವಲ್ಪ ಕಷ್ಟ. ಅದರಲ್ಲೂ ವಯಸ್ಸಾದವರ ಪಾಲಿಗೆ ಅಸಾಧ್ಯವಾದ ಮಾತು. ಆದರೆ ಆದಾ ಶರ್ಮಾ ಅವರ ತಾಯಿ ಸುನಾಯಾಸವಾಗಿ ಮಾಡಿ ತೋರಿಸುತ್ತಾರೆ. ಇದು ಒಂಥರಾ ಜಿಮ್ನಾಸ್ಟಿಕ್ ಇದ್ದಂತೆ. ಇದನ್ನು ನೋಡಿದ ಅಭಿಮಾನಿಗಳು, ನಂಬಕ್ಕೆ ಆಗುತ್ತಿಲ್ಲ, ಅದ್ಭುತ, ನಿಮ್ಮಮ್ಮ ತುಂಬಾ ಸ್ಫೂರ್ತಿವಂತರು...ಹೀಗೆ ಕಾಮೆಂಟ್‌ಗಳ ಸರಣಿಯೇ ಬರುತ್ತಿದೆ. ಇನ್ನು ನಿರ್ದೇಶಕ ಪುರಿ ಜಗನ್ನಾಥ್ ಅವರ ತಾಯಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ