ಆದಿತ್ಯಾ ಸಿನಿಮಾ ಕ್ಲಾಪ್ ಹೇಳಿದ ನಟ ದರ್ಶನ್ ತೂಗುದೀಪ್

ಗುರುವಾರ, 28 ಏಪ್ರಿಲ್ 2016 (12:13 IST)
ನಟ ಆದಿತ್ಯ ಹಾಗೂ ದರ್ಶನ್ ತೂಗುದೀಪ್ ಅವರು ಉತ್ತಮ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಸಾಕ್ಷಿ ಅವರಿಬ್ಬರು ಅಭಿನಯಿಸಿರುವಂತಹ ಸ್ನೇಹಾನಾ ಪ್ರೀತಿನಾ ಸಿನಿಮಾ. ಆದಿತ್ಯ ಸ್ಯಾಂಡಲ್ ವುಡ್ ನಲ್ಲಿ ಡೆಡ್ಲಿಸೋಮ ಸಿನಿಮಾದ ಮೂಲಕ ಗಮನ ಸೆಳೆದಿರುವಂತಹ ನಟ.

ಆದ್ರೆ ಆ ಬಳಿಕ ಅವರು ಅಭಿನಯಿಸದ ಸಿನಿಮಾಗಳು ಅವರಿಗೆ ಉತ್ತಮ ಯಶಸ್ಸು ತಂದುಕೊಡಲಿಲ್ಲ. ಇದೀಗ ಅವರು ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡೋದಕ್ಕೆ ಮುಂದಾಗಿದ್ದಾರೆ.

ಆದಿತ್ಯ ಈಗಾಗಲೇ ತಮಿಳು ಸಿನಿಮಾದಲ್ಲೂ ಅಭಿನಯಿಸಿ ಬಂದಿದ್ದಾರೆ. ಇದೀಗ ಕನ್ನಡಕ್ಕೆ ವಾಪಸ್ಸಾಗಿರುವ ನಟ ಆದಿತ್ಯ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅಂದ್ಹಾಗೆ ಆದಿತ್ಯ ಹೊಸ ಚಿತ್ರ 'ಬೆಂಗಳೂರು ಅಂಡರ್ . ಇತ್ತೀಚೆಗೆ ಸಿನಿಮಾದ ಮುಹೂರ್ತ ನಡೆಯಿತು. ನಟ ದರ್ಶನ್ ತೂಗುದೀಪ್ ಅವರು ಸ್ನೇಹಿತನ ಹೊಸ ಸಿನಿಮಾಗೆ ಕ್ಲಾಪ್ ಮಾಡೋ ಮೂಲಕ ಗೆಳೆಯನ ಚಿತ್ರಕ್ಕೆ ಶುಭಾಶಯ ಕೋರಿದ್ರು.

 ಈ ಹಿಂದೆ ಡೆಡ್ಲಿಸೋಮ ಸಿನಿಮಾ ಆದಿತ್ಯ ಅವರಿಗೆ ಉತ್ತಮ ಪ್ರಶಂಸೆ ಕೇಳಿ ಬಂದಿತ್ತು. ಇದೀಗ ಅಂಡರ್ ವರ್ಲ್ಡ್ ಕಥಾಹಂದರವಿರುವ ಸಿನಿಮಾದಲ್ಲಿ ಆದಿತ್ಯಾ ಅವರು ಅಭಿನಯಿಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು  ನಿರೀಕ್ಷೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ