20 ವರ್ಷಗಳ ನಂತ್ರ ತೆರೆಯತ್ತ ಖಾನ್ ಸಹೋದರರು..!!

ನಾಗಶ್ರೀ ಭಟ್

ಸೋಮವಾರ, 19 ಫೆಬ್ರವರಿ 2018 (13:54 IST)
ಚಕ್ರಿ ಟೋಲೆಟಿ ಅವರ ನಿರ್ದೇಶನದಲ್ಲಿ ಮುಂಬರಲಿರುವ 'ವೆಲ್‌‍ಕಮ್ ಟು ನ್ಯೂಯಾರ್ಕ್' ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಸಾಕಷ್ಟು ಮೆಚ್ಚುಗೆಗಳನ್ನು ಗಳಿಸಿವೆ. ಇದೀಗ ಜನರ ನೀರೀಕ್ಷೆಯನ್ನು ಹಾಗೂ ಕುತೂಹಲವನ್ನು ಹೆಚ್ಚಿಸುವಂತೆ ಈ ಚಿತ್ರದಲ್ಲಿ ಖಾನ್ ಸಹೋದರರಾದ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೋಹೆಲ್ ಖಾನ್ ಮೂವರೂ ಒಟ್ಟಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಕುತೂಹಲಕಾರಿಯಾದ ವಿಷಯವೇನೆಂದರೆ ಈ ಮೂವರೊಂದಿಗೆ ನಿರ್ಮಾಪಕ ವಶು ಭಗ್ನಾನಿಯವರೂ ಸಹ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. "ನಾನು ನಿಜವಾಗಿಯೂ ಮೂವರೂ ಖಾನ್ ಸಹೋದರರನ್ನು ಒಟ್ಟಿಗೆ ತೆಗೆದುಕೊಳ್ಳಲು ಬಯಸಿದ್ದೆ. ವ್ಯಕ್ತಿಗತವಾಗಿ ಸಲ್ಮಾನ್, ಅರ್ಬಾಜ್ ಮತ್ತು ಸೋಹಾಲಿ ಅವರು ತುಂಬಾ ಬೇರೆಯೇ ಆಗಿದ್ದಾರೆ, ಆದರೆ ಒಟ್ಟಿಗೆ ಅವರು ಮ್ಯಾಜಿಕ್ ಮಾಡುತ್ತಾರೆ" ಎಂದು ವಿಝ್ ಫಿಲ್ಮ್ಸ್‌ನ ಆಂಡ್ರೆ ಟಿಮ್ಮಿನ್ಸ್ ಹೇಳುತ್ತಾರೆ.
 
'ವೆಲ್‌‍ಕಮ್ ಟು ನ್ಯೂಯಾರ್ಕ್' ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ದಿಲ್ಜಿತ್ ದೋಸಾಂಜ್ ನಾಯಕ ನಾಯಕಿಯರಾಗಿ ಬಣ್ಣ ಹಚ್ಚಿದ್ದು ಪೂಜಾ ಮ್ಯೂಸಿಕ್ಸ್‌ನ ಸಂಗೀತವಿದೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ತಮಗಾಗಿ ಉತ್ತಮ ಜೀವನದ ಹುಡುಕಾಟದಲ್ಲಿ ಇರುತ್ತಾರೆ. ನ್ಯೂಯಾರ್ಕ್ ನಗರಕ್ಕೆ ಅವರಿಗೆದುರಾದ ಅನಿರೀಕ್ಷಿತ ಟ್ರಿಪ್‌ನಲ್ಲಿನ ಹಾಸ್ಯಭರಿತ ಸಾಹಸ ಅವರ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಪೂಜಾ ಫಿಲ್ಮ್ಸ್ ಮತ್ತು ವಿಝ್ ಫಿಲ್ಮ್ಸ್ ನಿರ್ಮಾಣದ 'ವೆಲ್‌‍ಕಮ್ ಟು ನ್ಯೂಯಾರ್ಕ್' ಫೆಬ್ರವರಿ 23 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ