ಫೇಸ್‌ಬುಕ್‌ಲ್ಲಿ ವಿವಾದಿತ ವಿಡಿಯೋ..ಸಚಿನ್ ತೆಂಡೂಲ್ಕರ್,ಲತಾ ಮಂಗೇಶ್ಕರಗೆ ಅಪಮಾನ

ಸೋಮವಾರ, 30 ಮೇ 2016 (12:20 IST)
ಎಐಬಿ ಹಾಸ್ಯನಟ ತನ್ಮಯ್ ಭಟ್ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದರು... ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಖ್ಯಾತ ಗಾಯಕಿ ಲತಾ ಮಂಗೇಶ್ವರ್‌‌ರನ್ನು ತನ್ಮಯ್ ಭಟ್ ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ಸಚಿನ್ ಹಾಗೂ ಲತಾ ಮಂಗೇಶ್ಕರ್ ಬಗ್ಗೆ ಗೇಲಿ ಮಾಡಲಾಗಿದೆಯಂತೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಪೋಸ್ಟ್ ಮಾಡಿರುವ ತನ್ಮಯ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 
 
'ಸಚಿನ್ ವರ್ಸಸ್ ಲತಾ ಸಿವಿಲ್ ವಾರ್' ಎಂಬ ಶೀರ್ಷಿಕೆಯಲ್ಲಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು. ವಿಡಿಯೋದಲ್ಲಿ ಲತಾ ಮೆಗೇಶ್ಕರ್ ಬಗ್ಗೆ ಕೆಲ ಪಂಚ್‌ಲೈನ್‌ಗಳನ್ನು ಬಳಸಲಾಗಿದೆ. 86 ವರ್ಷದ ಲತಾ, ಹಾಗೂ 43 ವರ್ಷದ ಸಚಿನ್ ತೆಂಡೂಲ್ಕರ್ ಬಗ್ಗೆ ಗೇಲಿ ಮಾಡಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ