ಈ ಒಂದು ವಿಡಿಯೋ ಮೂಲಕ ವಿಚ್ಛೇಧನದ ಸುದ್ದಿ ಹಬ್ಬಿಸುವವರ ಬಾಯಿ ಮುಚ್ಚಿಸಿದ ಐಶ್ವರ್ಯ, ಅಭಿಷೇಕ್

Sampriya

ಮಂಗಳವಾರ, 1 ಏಪ್ರಿಲ್ 2025 (18:38 IST)
Photo Courtesy X
ಮುಂಬೈ: ಪುಣೆಯಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆಗೆ ನಟಿ ಐಶ್ವರ್ಯಾ ರೈ , ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಜತೆ ಭಾಗವಹಿಸಿದರು. ಇನ್ನೂ ವಿಶೇಷ ಏನೆಂದರೆ ಬಾಲಿವುಡ್ ಕಪಲ್ಸ್‌ ತಮ್ಮ ಸಿನಿಮಾದ ಹಾಡಿಗೆ ಜೋಡಿಯಾಗಿ ಹೆಜ್ಜೆ ಹಾಕಿದರು.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಶೀಘ್ರದಲ್ಲೇ ವಿಚ್ಚೇಧನ ಪಡೆಯಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ದಂಪತಿ ಪ್ರತ್ಯೇಕವಾಗಿ ವಾಸವಾಗುತ್ತಿದ್ದು, ಜೋಡಿ ಡಿವೋರ್ಸ್ ಪಡೆಯಲಿದ್ದಾರೆಂಬ ವದಂತಿ ಇತ್ತು.  ಆದರೆ ಈ ವಿಚಾರದ ಬಗ್ಗೆ ಈ ಸ್ಟಾರ್ ಕಪಲ್ಸ್‌ ಎಲ್ಲೂ ಬಿಟ್ಟುಕೊಟ್ಟಿಲ್ಲ.

ಆದರೆ ಈ ವದಂತಿಗಳ ಮಧ್ಯೆಯೇ ಈ ಜೋಡಿ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಮೂಲಕ ತಮ್ಮ ವಿಚ್ಛೇಧನ ಊಹಾಪೋಹಗಳಿಗೆ ಅಂತ್ಯ ಹಾಡಿದರು.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಭಿಷೇಕ್, ಐಶ್ವರ್ಯಾ ಮತ್ತು ಆರಾಧ್ಯ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.  ಅಭಿಷೇಕ್ ಮತ್ತು ಐಶ್ವರ್ಯಾ ಅವರ ಐಕಾನಿಕ್ ಹಾಡಿನಲ್ಲಿ ನೃತ್ಯ ಮಾಡುವುದನ್ನು ನೋಡುವುದು ಅಭಿಮಾನಿಗಳಿಗೆ  ಖುಷಿ ನೀಡಿದೆ.

 ಅಭಿಮಾನಿಯೊಬ್ಬರು, "ಇಷ್ಟು ದಿನಗಳ ನಂತರ ಅವರು ಮತ್ತೆ ಸಂತೋಷವಾಗಿರುವುದನ್ನು ನೋಡಲು ತುಂಬಾ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
 
 
 
 
View this post on Instagram
 
 
 
 
 
 
 
 
 
 
 

A post shared by ETimes (@etimes)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ