ಮಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಒಂದೇ ಪದದಲ್ಲೇ ಮಾಧ್ಯಮದವರ ಬಾಯಿ ಮುಚ್ಚಿಸಿದ ಐಶ್ವರ್ಯ ರೈ

Sampriya

ಭಾನುವಾರ, 29 ಸೆಪ್ಟಂಬರ್ 2024 (10:37 IST)
Photo Courtesy X
ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಸಮಾರಂಭದ ನಂತರ ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಅಬುದಾಭಿಯಲ್ಲಿ ನಡೆದ IIFA ಉತ್ಸವ 2024ರಲ್ಲಿ ಮತ್ತೇ ಒಟ್ಟಿಗೆ ಕಾಣಿಸಿಕೊಂಡರು.

ಈ ವೇಳೆ ಹಸಿರು ಕಾರ್ಪೆಟ್‌ನಲ್ಲಿ ತಾಯಿ-ಮಗಳ ಜೋಡಿ ಪಾಪರಾಜಿಗಳಿಗೆ ಪೋಸ್ ನೀಡಿದೆ. ಈ ಮಧ್ಯೆ ವರದಿಗಾರರೊಬ್ಬರು ಐಶ್ವರ್ಯಾ ಬಳಿ ಮಗಳು ಆರಾಧ್ಯಳನ್ನು ಯಾವಾಗಳೂ ಯಾಕೆ ನಿಮ್ಮೊಂದಿಗೆ ಕರೆಯೊಯ್ಯುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.  

ಈ ವೇಳೆ ಆರಾಧ್ಯಳ ಬಗ್ಗೆ ವರದಿಗಾರ್ತಿ ಮತ್ತಷ್ಟು ಕೇಳಲು ಮುಂದದಾಗ, "ವಾಹ್!!!!!! ಅವಳು ನನ್ನ ಮಗಳು, ಅವಳು ಯಾವಾಗಲೂ ನನ್ನೊಂದಿಗೆ ಇರುತ್ತಾಳೆ." ಎಂದು ನಗುತ್ತಲೇ ಐಶ್ವರ್ಯ ಉತ್ತರ ಕೊಟ್ಟಿದ್ದಾರೆ. ಅಮ್ಮನ ಪಕ್ಕದಲ್ಲೇ ಇದ್ದ ಆರಾಧ್ಯ ನಾಚಿಕೆಯಿಂದ ನಕ್ಕಿದ್ದಾಳೆ.

ಐಶ್ವರ್ಯಾ ರೈ ಅವರು ತಾವು ಪಾಲ್ಗೊಳ್ಳುವ ಎಲ್ಲ ಸಮಾರಂಭಗಳಲ್ಲಿಯೂ ತಮ್ಮ ಮಗಳನ್ನು ಜತೆಗೆಯೇ ಕರೆದುಕೊಂಡು ಹೋಗುತ್ತಾರೆ. ವಿದೇಶಕ್ಕೆ ಹೋಗುವಾಗಲು ಮಗಳನ್ನು ಒಟ್ಟಿಗೆಯೇ ಕರೆದುಕೊಂಡು ಹೋಗುತ್ತಾರೆ. ಈ ವಿಚಾರವಾಗಿ ಐಶ್ವರ್ಯ ಅವರನ್ನು ಪಾಪರಾಚಿಗಳು ಆಗಾಗ ಪ್ರಶ್ನೆ ಮಾಡುತ್ತಿರುತ್ತಾರೆ. ಆದರೆ ಐಶ್ವರ್ಯ ಮಾತ್ರ ತಮ್ಮ ಮಗಳ ವಿಚಾರದಲ್ಲಿ ಯಾರ ಪ್ರಶ್ನೆಗೂ ಕ್ಯಾರೇ ಎನ್ನುವುದಿಲ್ಲ.

ಈಚೆಗೆ ಕೆಜಿಎಫ್ ಖ್ಯಾತಿಯ ನಟಿ ಮಾಳವಿಕಾ ಕೂಡಾ  ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು  ಹ್ಯಾಂಡ್‌ಬ್ಯಾಗ್‌ನಂತೆ ಜತೆಯಲ್ಲಿ ಎಲ್ಲ ಕಡೆ ಕರೆದುಕೊಂಡು ಹೋಗುವುದು ಎಂಥಾ ಸಂಸ್ಕೃತಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ, ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ  ಎಂದು ಹೇಳಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ