ತಾಳಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವ ಆನೆ ವೈರಲ್ ವಿಡಿಯೋ

Krishnaveni K

ಶುಕ್ರವಾರ, 14 ಫೆಬ್ರವರಿ 2025 (15:51 IST)
ತಿರುವನಂತಪುರಂ: ತಾಳಕ್ಕೆ ತಕ್ಕಂತೆ ಕುಣಿಯಬೇಕು ಎನ್ನುವ ಮಾತನ್ನು ಈ ಮರಿ ಆನೆ ಗಂಭೀರವಾಗಿ ಪರಿಗಣಿಸಿದಂತಿದೆ. ಕೇರಳದ ಮರಿ ಆನೆಯೊಂದು ಮ್ಯೂಸಿಕ್ ಗೆ ತಕ್ಕ ಹಾಗೆ ಡ್ಯಾನ್ಸ್ ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೇರಳದ ದೇವಾಲಯಗಳಲ್ಲಿ ಆನೆಗಳು ಇದ್ದೇ ಇರುತ್ತವೆ. ಇವುಗಳು ಹೇಗೆ ನಮ್ಮ ಜೀವನಕ್ಕೆ ಒಗ್ಗಿಕೊಂಡಿವೆ ಎಂದರೆ ಮನುಷ್ಯರ ಭಾಷೆ ಅವುಗಳಿಗೆ ಚೆನ್ನಾಗಿಯೇ ಅರ್ಥವಾಗುತ್ತದೆ. ಅಂತಹದ್ದೇ ಮರಿ ಆನೆಯೊಂದರ ವಿಡಿಯೋ ಈಗ ವೈರಲ್ ಆಗಿದೆ.

ಜೋರಾಗಿ ಡಿಜೆ ಮ್ಯೂಸಿಕ್ ಶಬ್ಧ ಕೇಳಿದ ಮರಿ ಆನೆಗೆ ಜೋಷ್ ಬರುತ್ತದೆ. ತನ್ನ ಗುಂಡು ಗುಂಡು ದೇಹವನ್ನು ಅಲ್ಲಾಡಿಸಿಕೊಂಡು ಡಿಜೆ ಮ್ಯೂಸಿಕ್ ಗೆ ತಕ್ಕ ಹಾಗೇ ಡ್ಯಾನ್ಸ್ ಮಾಡುತ್ತದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆನೆಗಳ ತುಂಟಾಟದ ಹಲವು ವಿಡಿಯೋಗಳನ್ನು ನಾವು ವೀಕ್ಷಿಸಿದ್ದೇವೆ. ಆ ಪೈಕಿ ಈ  ವಿಡಿಯೋ ಅಂತೂ ಸ್ಪೆಷಲ್ ಆಗಿದೆ. ವಿಡಿಯೋ ಇಲ್ಲಿ ವೀಕ್ಷಣೆ ಮಾಡಿ.

A Baby Elephant dancing to a prayer in Thrissur, Kerala. So lovable ???? pic.twitter.com/Ze2jNSrh0A

— Naresh G Pahuja (@png60) February 13, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ