ಐಶ್ವರ್ಯಾ ರೈ ಬಚ್ಚನ್ ಮತ್ತೊಂದು ಮುಖ ಬಯಲು!

ಮಂಗಳವಾರ, 7 ನವೆಂಬರ್ 2017 (09:34 IST)
ಮುಂಬೈ: ಬಾಲಿವುಡ್ ಬೆಡಗಿ ಬಚ್ಚನ್ ಕುಟುಂಬದ ಬಹು ಐಶ್ವರ್ಯಾ ರೈ ಒಂದೊಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾರೆ. ಅದಕ್ಕೆ ತಮ್ಮ ಜನ್ಮದಿನದಂದೇ ಓಂಕಾರ ಹಾಕಿದ್ದಾರೆ.

 
ಹೌದು, ಬಚ್ಚನ್ ಸೊಸೆ ಐಶ್ ಇತ್ತೀಚೆಗೆ ಜನ್ಮ ದಿನ ಆಚರಿಸಿಕೊಂಡಿದ್ದರು. ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಐಶ್ವರ್ಯಾ ಒಂದು ವರ್ಷದ ಅವಧಿಗೆ 1000 ಮಕ್ಕಳಿಗೆ ಉಚಿತ ಊಟ ನೀಡುವ ಯೋಜನೆಗೆ ಕೈಜೋಡಿಸಿದ್ದಾರೆ.

ಇಸ್ಕಾನ್  ಸಂಸ್ಥೆಯ ಅನ್ನಾಮೃತ ಫೌಂಡೇಷನ್ ವತಿಯಿಂದ ನೀಡಲಾಗುವ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಸುಮಾರು 1000 ಮಕ್ಕಳಿಗೆ ಒಂದು ವರ್ಷದ  ಅವಧಿಗೆ ಉಚಿತ ಊಟ ನೀಡಲು ಐಶ್ವರ್ಯಾ ದೇಣಿಗೆ ನೀಡಿದ್ದಾರೆ. ಈ ಮೂಲಕ ತಮ್ಮ ಜನ್ಮ ದಿನದಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ