ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಸ್ಥಾನ

ಶುಕ್ರವಾರ, 3 ನವೆಂಬರ್ 2017 (18:01 IST)
ಫೋರ್ಬ್ಸ್ ಮ್ಯಾಗ್‌ಜಿನ್ 2017ರ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಬಾಲಿವುಡ್, ಹಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದ್ದಾರೆ.
ವಿಶ್ವದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಐವಾಂಕಾ ಟ್ರಂಪ್, ಇಂದ್ರಾ ನೂಯಿ, ಓಪ್ರಾ ವಿನ್‌ಫ್ರೈ, ಕ್ವೀನ್ ಎಲಿಜಾಬೆತ್ 2, ಬೆಯಾನ್ಸ್ ನೋಲೆಸ್ , ಜೆ.ಕೆ.ರೌಲಿಂಗ್ ಮತ್ತು ಟೇಲರ್ ಸ್ವಿಫ್ಟ್ ಸ್ಥಾನ ಪಡೆದಿದ್ದು, ಪ್ರಿಯಾಂಕಾ 97ನೇ ಸ್ಥಾನವನ್ನು ಪಡೆದಿದ್ದಾರೆ.
 
ಮೇರಿಕೋಮ್ ಚಿತ್ರದ ನಾಯಕಿಯಾದ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
 
ಫೋರ್ಬ್ಸ್ ಮ್ಯಾಗ್‌ಜಿನ್ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿ ಸ್ಥಾನ ಪಡೆದಿಲ್ಲ. ಟಿವಿ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 
 
ಬಾಲಿವುಡ್ ಗೆಳೆಯರಾದ ರಾಜಕುಮಾರ್ ರಾವ್, ದಿಯಾ ಮಿರ್ಜಾ ಮತ್ತು ತಾರಾ ಶರ್ಮಾ ಸಲುಜಾ ಪ್ರಿಯಾಂಕಾ ಚೋಪ್ರಾ ಅವರನ್ನು ಅಭಿನಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ