ಶಾಕಿಂಗ್! ಬಾಡಿಗೆ ತಾಯಿಯಾಗಲಿದ್ದಾರೆ ಐಶ್ವರ್ಯಾ ರೈ ಬಚ್ಚನ್

ಸೋಮವಾರ, 8 ಜನವರಿ 2018 (17:26 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಬಾಡಿಗೆ ತಾಯಿಯಾಗಲಿದ್ದಾರಂತೆ! ಯಾರಿಗೆ, ಯಾಕೆ ಎಂದು ಅಚ್ಚರಿಯಾಯಿತೇ? ಹಾಗಿದ್ದರೆ ಈ ಸುದ್ದಿ ಓದಿ.
 

ಏಕ್ ಟಾಯ್ಲೆಟ್ ಪ್ರೇಮ್ ಕಥಾ ಎಂಬ ವಿನೂತನ ಸಿನಿಮಾ ಮಾಡಿದ ಕ್ರಿ ಆರ್ಜ್ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾ ಜಾಸ್ಮಿನ್ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ. ಆ ಸಿನಿಮಾದಲ್ಲಿ ಬಾಡಿಗೆ ತಾಯಿಯ ಬಗ್ಗೆ ಕತೆಯಿದ್ದು, ಆ ಪಾತ್ರವನ್ನು ಐಶ್ವರ್ಯಾ ರೈ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.

ಅಂದರೆ ತೆರೆಯ ಮೇಲೆ ಹಲವು ರೀತಿಯ ಪಾತ್ರ ಮಾಡಿ ಮಿಂಚಿದ್ದ ಐಶ್ವರ್ಯಾ ಇದೀಗ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಮಾಡಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಮೂಲಗಳ ಪ್ರಕಾರ ಇದಕ್ಕೂ ಮೊದಲು ಈ ಪಾತ್ರವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಾಡುವುದೆಂದಿತ್ತಂತೆ. ಆದರೆ ಅದೀಗ ಐಶ್ ಪಾಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ