ಹೌಸ್‌ಫುಲ್-3 ಚಿತ್ರತಂಡಕ್ಕೆ ಭೋಜನಕೂಟದ ಸತ್ಕಾರ ನೀಡಿದ ಅಕ್ಷಯ್

ಶನಿವಾರ, 28 ಮೇ 2016 (17:04 IST)
ಹೌಸ್‌ಫುಲ್-3 ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿರುವುದು ನಿಮಗೆಲ್ಲರಿಗೂ ಗೊತ್ತು.. ಅಕ್ಕಿ ಹೌಸ್‌ಫುಲ್ ಚಿತ್ರದ ಇಡೀ ಟೀಮ್‌ಗೆ ಭೋಜನಕೂಟ ಆಯೋಜನೆ ಮಾಡಿದ್ದರು.

ಅಕ್ಕಿ ಆಯೋಜನೆ ಮಾಡಿದ್ದ ಭೋಜನಕೂಟ ಎಲ್ಲರಿಗೂ ಸರ್‌ಪ್ರೈಜ್ ನೀಡುವಂತಿತ್ತು. ದೆಹಲಿಯಲ್ಲಿ ಪ್ರಚಾರದ ವೇಳೆ ಅಕ್ಷಯ್ ಚಿತ್ರತಂಡಕ್ಕೆ ಟ್ರೀಟ್ ನೀಡಿದ್ದಾರೆ.. 
 
ಇನ್ನೂ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ ಬಚ್ಚನ್, ಹಾಗೂ ರಿತೇಶ್ ದೇಶಮುಥ್ ಲೀಸಾ ಹೆಡನ್, ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಅಭಿನಯ ಸಖತ್ತಾಗಿ ಮೂಡಿ ಬಂದಿದೆ. ಅಲ್ಲದೇ ಚಿತ್ರದ ಹಾಡುಗಳು ಸಹ ರಿಲೀಸ್ ಆಗಿದ್ದು, ಈಗಾಗ್ಲೇ ಸಖತ್ ಸೌಂಡು ಮಾಡ್ತಿವೆ.
 
ಸಾಜೀದ್ ನಿರ್ದೇಶನದ ಹೌಸ್‌ಫುಲ್-3 ಚಿತ್ರದಲ್ಲಿ ಅಕ್ಕಿ, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್ ಫರ್ನಾಂಡಿಸ್ , ನರ್ಗಿಸ್ ಫಕ್ರಿ, ಲಿಸಾ ಹೆಡನ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಹೌಸ್‌ಫುಲ್ ಚಿತ್ರ ಜೂನ್ 3ರಂದು ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ