ಒಂದೇ ರಿಲೀಸ್ ಆಗಲಿದೆ ಅಕ್ಕಿ- ಹೃತಿಕ್ ರೋಷನ್ ಸಿನಿಮಾ

ಗುರುವಾರ, 19 ಮೇ 2016 (18:22 IST)
ಬಾಲಿವುಡ್ ನಲ್ಲಿ ಇಬ್ಬರು ಖ್ಯಾತನಾಮ ನಟರ ಸಿನಿಮಾಗಳು ಒಂದೇ ದಿನ ರಿಲೀಸ್ ಆದ್ರೆ ಅಂತಹ ಸಿನಿಮಾಗಳಿಗೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಅನ್ನೋದಕ್ಕೆ ನಮ್ಮ ಕಣ್ಣಮುಂದೆ ಸಾಕಷ್ಟು ಉದಾಹರಣೆಗಳಿವೆ. 
ಹೀಗಿರುವಾಗಲೇ ಬಾಲಿವುಡ್ ನ ಇಬ್ಬರು ಖ್ಯಾತನಟರ ಸಿನಿಮಾಗಳು ಅದೀಗ ಒಂದೇ ದಿನ ರಿಲೀಸ್ ಆಗೋದು ಪಕ್ಕಾ ಆಗಿದೆ.
 
ಕಳೆದ ವರ್ಷ ಶಾರುಖ್ ಖಾನ್ ಅಭಿನಯದ ದಿಲ್ ವಾಲೇ ಸಿನಿಮಾ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಭಾಜೀರಾವ್ ಮಸ್ತಾನಿ ಸಿನಿಮಾ ಒಂದೇ ದಿನ ರಿಲೀಸ್ ಆಗಿತ್ತು. 
 
ಪ್ರೇಕ್ಷಕ ಮಹಾಪ್ರಭು ಭಾಜೀರಾವ್ ರಾವ್ ಮಸ್ತಾನಿ ಸಿನಿಮಾವನ್ನು ನೆಚ್ಚಿಕೊಂಡ್ರೆ ಶಾರುಖ್ ಖಾನ್ ಅಭಿನಯದ ದಿಲ್ ವಾಲೇ ಸಿನಿಮಾದ ಬಗ್ಗೆ ಅಷ್ಟೊಂದು ಒಲವು ತೋರಿರಲಿಲ್ಲ.ಅದಕ್ಕೆ ಕಾರಣ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿದ್ದು.ಇದೀಗ ಹೃತಿಕ್ ರೋಷನ್ ಅವರ ಮೊಹೆಂಜಾದಾರೋ ಸಿನಿಮಾ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರುಸ್ತೋಮ್ ಸಿನಿಮಾ ಕೂಡ ಒಂದೇ ದಿನ ರಿಲೀಸ್ ಆಗಲಿದೆಯಂತೆ.
 
ಅಶುತೋಷ್ ಗೌವಾರಿಕರ್ ನಿರ್ದೇಶನದ ಮೊಹೆಂಜದಾರೋ ಸಿನಿಮಾ ಆಗಸ್ಟ್ 12 ರಂದು ರಿಲೀಸ್ ಆಗಲಿದೆ.ಅಂದ್ಹಾಗೆ ಸಿನಿಮಾದ ನಿರ್ದೇಶಕರಾದ ಅಶುತೋಷ್ ಈಗಾಗಲೇ ರಸ್ತುಮ್ ತಂಡದಲ್ಲಿ ಸಿನಿಮಾದ ರಿಲೀಸ್ ಡೇಟ್ ಅನ್ನು ಬದಲಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರಂತೆ.
 
ಆದ್ರೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲವಂತೆ. ಹಾಗಾಗಿ ನಾವು ಏನೇ ಆದ್ರೂ ಈಗಾಗಲೇ ಫಿಕ್ಸ್ ಮಾಡಿರುವ ದಿನಾಂಕಕ್ಕೆ ಸಿನಿಮಾ ರಿಲೀಸ್ ಮಾಡುತ್ತೇವೆ ಅಂದಿದ್ದಾರೆ.ಹಾಗಾಗಿ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗೋದು ಪಕ್ಕಾ ಆಗಿದೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ