ಅಲಿಯಾ ಭಟ್- ಶ್ರಧ್ಧಾ ಕಪೂರ್ ಮಧ್ಯೆ ಕೋಲ್ಡ್ ವಾರ್

ಮಂಗಳವಾರ, 10 ಮೇ 2016 (12:35 IST)
ಬಾಲಿವುಡ್‌ನಲ್ಲಿ ಅಲಿಯಾ ಭಟ್ ಹಾಗೂ ಶ್ರಧ್ದಾ ಕಪೂರ್ ಹೊಸದಾಗಿ ಎಂಟ್ರಿ ಕೊಟ್ಟ ನಟಿಯರಲ್ಲಿ ಒಬ್ಬರು...ಸದ್ಯದ ಮಾಹಿತಿ ಪ್ರಕಾರ ಇಬ್ಬರ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ. ಇಬ್ಬರು ಮಾತಾಡಿಲ್ವಂತೆ.. ಅದು ತುಂಬಾ ದಿನಗಳಿಂದ.. ಹೀಗಂತ ಬಾಲಿವುಡ್‌ನಲ್ಲೂ ಕೇಳಿ ಬರ್ತಿದೆ. 
ಕೆಲ ಮೂಲಗಳ ಪ್ರಕಾರ ಸಿದ್ಧಾರ್ಥ ಮಲೋತ್ರಾ ಹೊಸ ಚಿತ್ರಕ್ಕೆ ಸಹಿ ಹಾಕಿಲ್ವಂತೆ. ಯಾಕಂದ್ರೆ ಆ ಚಿತ್ರದಲ್ಲಿ ಶ್ರದ್ಧಾ ಕಪೂರ್ ಇದ್ದ ಕಾರಣಕ್ಕಾಗಿ, ಅಲಿಯಾ ತನ್ನ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲೋತ್ರಾಗೆ ಚಿತ್ರದಲ್ಲಿ ನಟಿಸದಂತೆ ಹೇಳಿದ್ರಂತೆ ಎಂದು ಹೇಳಲಾಗ್ತಿದೆ. ಇನ್ನೂ ಅಲಿಯಾ ಮತ್ತು ಶ್ರದ್ಧಾ ಮದ್ಯೆ ಯಾವುದೇ ಫ್ರೆಂಡ್‌ಶಿಪ್ ಇಲ್ವಂತೆ. 

ಈ ಹಿಂದೆ ಚಿತ್ರ ಈ ಚಿತ್ರದಲ್ಲಿರುವ ಹಾಡು ಸನ್ ಸಾಥಿಯಾ ಹಾಡನ್ನು ನೋಡಿದ ಬಳಿಕ ಅಲಿಯ ಭಟ್ ಫ್ಲಾಟ್ ಆದಳಂತೆ. ಅದಕ್ಕೆ ಮುಖ್ಯ ಕಾರಣ ಶ್ರದ್ಧಾ ಡ್ಯಾನ್ಸ್ ಮೂವ್ ಮೆಂಟ್ ಅಲಿಯಾಗೆ ತುಂಬಾ ಇಷ್ಟವಾಯ್ತಂತೆ.

ಅದರಿಂದ ಖುಷಿಪಟ್ಟ ಅಲಿಯ  ವಾರ್ರೆವ್ವಾ ಏನ್ ಸಕತ್ತಾಗಿ ಡ್ಯಾನ್ಸ್ ಮಾಡಿದ್ದೀಯ ಶ್ರದ್ಧಾ ಎಂದು ಟ್ವೀಟ್ ಮಾಡಿ ಹೇಳಿ ತನ್ನ ಖುಷಿ ಹಂಚಿಕೊಂಡಿದ್ದಳು.ಈ ಭಾಮೆ.ವರುಣ್ ಧವನ್ ಸ್ನೇಹದ ಬಗ್ಗೆ ಅಲಿಯ ಹಾಗೂ ಶ್ರದ್ಧಾ ನಡುವೆ ಪೈಪೋಟಿ ಇದೆ ಎನ್ನುವ ಸುದ್ದಿಯನ್ನು ಮಾಧ್ಯಮಗಳು ಹರಡಿದ್ದವು. 


 

ವೆಬ್ದುನಿಯಾವನ್ನು ಓದಿ