Sara Tendulkar: ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಗೆ ಹೊಸ ಬಾಯ್ ಫ್ರೆಂಡ್: ಸಾರಾ ಹೊಸ ಹುಡುಗ ಯಾರು ಗೊತ್ತಾ

Krishnaveni K

ಸೋಮವಾರ, 5 ಮೇ 2025 (09:18 IST)
Photo Credit: X
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಈಗ ಹೊಸ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಗುಸು ಗುಸು ಹರಡಿದೆ. ಅಷ್ಟಕ್ಕೂ ಅವರ ಹೊಸ ಬಾಯ್ ಫ್ರೆಂಡ್ ಯಾರು ಗೊತ್ತಾ?

ಸಚಿನ್ ಪುತ್ರಿಯ ಹೆಸರು ಈ ಹಿಂದೆ ಕ್ರಿಕೆಟಿಗ ಶುಬ್ಮನ್ ಗಿಲ್ ಜೊತೆ ಥಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಯಾಗಿ ಓಡಾಡಿದ ವಿಡಿಯೋಗಳೂ ವೈರಲ್ ಆಗಿತ್ತು. ಇದೀಗ ಸಚಿನ್ ಪುತ್ರಿಯ ಹೆಸರು ಮತ್ತೊಬ್ಬ ಸ್ಟಾರ್ ನಟನ ಜೊತೆ ಥಳುಕು ಹಾಕಿಕೊಂಡಿದೆ.

ಗಲ್ಲಿ ಭಾಯ್ ಸಿನಿಮಾ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ ಜೊತೆ ಸಾರಾ ಹೆಸರು ಥಳುಕು ಹಾಕಿಕೊಂಡಿದೆ. ಇಬ್ಬರೂ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಆದರೆ ಈ ಹಿಂದೆ ಶುಬ್ಮನ್ ಜೊತೆ ಹೆಸರು ಥಳುಕು ಹಾಕಿಕೊಂಡಿದ್ದಾಗಲೂ ಸಾರಾ ಆದಷ್ಟು ಕ್ಯಾಮರಾ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸಿದ್ದರು. ಈಗ ಸಿದ್ಧಾರ್ಥ್ ಜೊತೆಗಿನ ತಮ್ಮ ಸಂಬಂಧವೂ ಬಹಿರಂಗವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ