ರಣಬೀರ್ ಕಪೂರ್ ಜೊತೆ ಮದುವೆಯಾಗುವುದರ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ ಆಲಿಯಾ ಭಟ್
ಶನಿವಾರ, 26 ಮೇ 2018 (06:36 IST)
ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಆದರೆ ಇದೀಗ ಆಲಿಯಾ ಭಟ್ ಅವರು ಟ್ವೀಟ್ ವೊಂದನ್ನು ಮಾಡುವುದರ ಮೂಲಕ ತಮ್ಮ ಸಂಬಂಧದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ನಡುವೆ ಪ್ರೀತಿ ಹುಟ್ಟಿರುವುದರ ಬಗ್ಗೆ ರೂಮರ್ಸ್ ಗಳು ಕೇಳಿಬಂದಿತೆ ವಿನಃ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿರಲಿಲ್ಲ. ಆದರೆ ಇದೀಗ ರಣಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಅವರು 'ಭಟ್ ಕುಟುಂಬದಲ್ಲಿ(ಸಂಬಂಧಿಕರು)ಬಹುತೇಕ ಅತ್ಯುತ್ತಮ ಪ್ರತಿಭೆಗಳ ಜೊತೆ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಲಿಯಾ ಭಟ್ ಅವರು ‘ಖಂಡಿತಾ ಸರ್, ಮತ್ತೆ ಒಟ್ಟಿಗೆ ಕೆಲಸ ಮಾಡೋಣ. ಈ ಸಲ ಎಲ್ಲರೂ ಒಟ್ಟಿಗೆ' ಎಂದು ರಿಟ್ವೀಟ್ ಮಾಡಿದ್ದು ಇದೀಗ ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ