ಆಲಿಯಾಗೆ ನ್ಯಾಷನಲ್ ಅವಾರ್ಡ್ ಸಿಗಬೇಕು ಎಂದ ಶಾಹಿದ್ ಕಪೂರ್

ಶನಿವಾರ, 18 ಜೂನ್ 2016 (15:09 IST)
'ಉಡ್ತಾ ಪಂಜಾಬ್' ಚಿತ್ರದ ಕೋ-ಸ್ಟಾರ್ ಶಾಹಿದ್ ಕಪೂರ್ ಆಲಿಯಾಗೆ ನ್ಯಾಷನಲ್ ಅವಾರ್ಡ್ ಸಿಗಬೇಕು ಎಂದು ತಿಳಿಸಿದ್ದಾರೆ. ಉಡ್ತಾ ಪಂಜಾಬ್ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ತೋರಿದ ಆಲಿಯಾಗೆ ಬಿಟೌನ್‌ನಲ್ಲಿ ಪ್ರಶಂಸೆಗಳೇ ಕೇಳಿ ಬರುತ್ತಿವೆ. ಬಾಲಿವುಡ್‌ನ ಹಲವು ದಿಗ್ಗಜರು ಆಲಿಯಾ ಉತ್ತಮ ಪ್ರದರ್ಶನ ತೋರಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಇದರ ಬೆನ್ನಲ್ಲೇ ನಟ ಶಾಹಿದ್ ಕಪೂರ್ ಕೂಡ ಆಲಿಯಾಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂದು ಆಶಿಸಿದ್ದಾರೆ. ಆಲಿಯಾ ಚಿತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ನ್ಯಾಷನಲ್ ಅವಾರ್ಡ್ ಸಿಗಬೇಕು ಎಂದು ತಿಳಿಸಿದ್ದಾರೆ.

ಓಪನಿಂಗ್ ದಿನದಲ್ಲಿ ಸರಾಸರಿಯಷ್ಟು ಅಂದ್ರೆ 8 ರಿಂದ 9 ಕೋಟಿ ಗಳಿಕೆ ಕಂಡಿದ್ದು. ಈ ಚಿತ್ರದಲ್ಲಿ ಪ್ರಮುಖ ಆಲಿಯಾ ಭಟ್, ಶಾಹಿದ್ ಕಪೂರ್, ಕರೀನಾ ಕಪೂರ್ ಹಾಗೂ ದಿಲ್ಜಿತ್ ಅಭಿನಯಿಸಿದ್ದಾರೆ.

ಉಡ್ತಾ ಪಂಜಾಬ್ ಚಿತ್ರ 2.000 ಸ್ಕ್ರೀನ್ ಮೇಲೆ ಚಿತ್ರ ತೆರೆ ಕಂಡಿದೆ.ಜನ ಸಾಮಾನ್ಯರಿಗೆ ಅನುಕೂಲವಾಗಲೆಂದು ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಮೇಲೂ ಚಿತ್ರ ತೆರೆ ಕಂಡಿದ್ದು, ಯಾರು ಬೇಕಾದರೆ ಹೋಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ