ಇನ್ನೂ ತಮಿಳು ಚಿತ್ರ ವೇಲ್ಯೆಯಿಲಾ ಪಟ್ಟಧಾರಿ ರಾಕ್ಲೈನ್ ವೆಂಕಟೇಶ್ ಕನ್ನಡಕ್ಕೆ ರಿಮೇಕ್ ಆಗಿಲಿರುವ ಚಿತ್ರದಲ್ಲಿ ಅಮಲಾ ನಟಿಸಲಿದ್ದಾರೆ.ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅವರೇ ಈ ಸಿನಿಮಾದಲ್ಲಿ ಅಮಲಾ ಪೌಲ್ ಅವರು ಅಭಿನಯಿಸುತ್ತಿರೋದನ್ನು ಖಚಿತಪಡಿಸಿದ್ದಾರೆ.ಅಲ್ಲದೇ ಸಿನಿಮಾದ ಕುರಿತಾದ ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ನಿಮ್ಮ ಮುಂದಿಡುತ್ತೇವೆ ಅಂತಾ ಅವರು ಹೇಳಿದ್ದಾರೆ.
ಇನ್ನೂ ಮನರಂಜನಾ ಚಿತ್ರದಲ್ಲೂ ಅಮಲಾ ನಟಿಸುತ್ತಿದ್ದಾರೆ. ಹಾಗಾಗಿ ಅಮಲಾ ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡ್ರೂ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ತಮಿಳು ಚಿತ್ರರಂಗದಿಂದ ಅಮಲಾರನ್ನು ಬ್ಯಾನ್ ಮಾಡಿದ್ರು, ಅಮಲಾಗೆ ಅವಕಾಶಗಳೇನು ಕಮ್ಮಿ ಆಗಿಲ್ಲ.