ಅಮಿತಾಬ್ ಬಚ್ಚನ್ 'TE3N'ಚಿತ್ರ ಜೂನ್ 10ಕ್ಕೆ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಟ್ವಿಟ್ ಮಾಡಿದ್ದಾರೆ. ರಿಲೀಸ್‌ಗೆ ಮುದಾಗಿವೆ ಅಮಿತಾಬ್ ಬಚ್ಚನ್ ಅಭಿನಯದ 'Te3n' ಚಿತ್ರ ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ. ಇದಕ್ಕಾಗಿ ಅಮಿತಾಬ್ ಬಚ್ಚನ್ ಅಭಿಮಾನಿಗಳು ಕಾತುರರಾಗಿದ್ದಾರೆ.
ಈ ಹಿಂದೆ ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ಇಬ್ಬರ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತವೆ ಎಂದು ಹೇಳಲಾಗ್ತಿತ್ತು. ಆದರೆ ಚಿತ್ರದ ನಿರ್ದೇಶಕರು ಚಿತ್ರವನ್ನು ಜೂನ್ 10ರಂದು ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ.
ಸರಬ್ಜಿತ್ ಸಿನಿಮಾ ಮೇ. 20ರಂದು ರಿಲೀಸ್ ಆಗಲಿದೆ. ಇನ್ನೂ 'Te3n' ಚಿತ್ರ ಜೂನ್ 10ರಂದು ಸ್ಕ್ರಿನ್ ಮೇಲೆ ಬರಲು ಸಜ್ಜಾಗಿದೆ. ಬಾಲಿವುಡ್‍ನಲ್ಲಿ ಇದೇ ಮೊದಲ ಬಾರಿಗೆ ಫಾದರ್ -ಇನ್-ಲಾ ಹಾಗೂ ಮದರ್ -ಇನ್ -ಲಾ ಚಿತ್ರಗಳು ರಿಲೀಸ್ ಆಗುತ್ತಿವೆ. ಇದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ.
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ.