ಸಿನಿ ಬದುಕಿನ 51 ನೇ ವರ್ಷದಲ್ಲಿ ಹೊಸ ಸವಾಲಿಗೆ ಸಿದ್ಧರಾದ ಬಿಗ್ ಬಿ ಅಮಿತಾಭ್ ಬಚ್ಚನ್

ಶುಕ್ರವಾರ, 15 ಮೇ 2020 (09:33 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈಗಾಗಲೇ ತಮ್ಮ ಕಲಾಬದುಕಿನಲ್ಲಿ 51 ವರ್ಷಗಳನ್ನು ಕಳೆದಿದ್ದಾರೆ. ಇದೀಗ ಅವರು ಹೊಸ ಸವಾಲಿಗೆ ಸಿದ್ದರಾಗಿದ್ದಾರೆ.

 

ಇಷ್ಟು ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಇದೀಗ ಹೊಸ ಸವಾಲಿಗೆ ಸಿದ್ಧನಾಗುತ್ತಿದ್ದೇನೆ. ಅದುವೇ ಡಿಜಿಟಲ್ ರಿಲೀಸ್. ನನ್ನ ಸಿನಿಮಾ ಗುಲಾಬೋ ಸಿತಾಬೋ ಡಿಜಿಟಲ್ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ. ಇದು ನನಗೆ ಹೊಸತು. ಇಂತಹ ಹೊಸ ಸವಾಲಿನಲ್ಲಿ ಭಾಗಿಯಾಗುತ್ತಿರುವುದು ಗೌರವ ಎನಿಸುತ್ತಿದೆ’ ಎಂದು ಅಮಿತಾಭ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಸದ್ಯಕ್ಕೆ ಚಿತ್ರಮಂದಿರ ತೆರೆಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಚಿತ್ರರಂಗ ಡಿಜಿಟಲ್ ವೇದಿಕೆಗಳತ್ತ ಗಮನ ಹರಿಸುತ್ತಿದೆ. ಇದೀಗ ಅಮಿತಾಭ್ ರ ಗುಲಾಬೋ ಸಿತಾಬೋ ಜೂನ್ 12 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ