ನನ್ನ ಬಗ್ಗೆ ತಪ್ಪಾಗಿ ಬರೆಯಲಾಗಿದೆ, ನಾನು ಮದುವೆಯಾಗಿಲ್ಲ: ನಟಿ ಅಮೃತಾ ಅರೋರಾ

ಮಂಗಳವಾರ, 26 ಏಪ್ರಿಲ್ 2016 (17:07 IST)
ಸಾಮಾಜಿಕ ಮಾಧ್ಯಮಗಳ ಮೇಲೆ ಅಮೃತಾ ಅರೋರಾ ಸಿಟ್ಟಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ ಮಹಿಳೆಯರ ಕುರಿತಾತ ವಿಶೇಷ ಲೇಖನದಲ್ಲಿ ಅಮೃತಾ ಅರೋರಾ ಬಗ್ಗೆ ಬರೆಯಲಾಗಿತ್ತು. ಅಮೃತಾಗೆ ಮದುವೆಯಾಗಿದೆ, ಅವರಿಗೆ ಮಗುವಿದೆ ಎಂದು ಲೇಖನದಲ್ಲಿ ಹೇಳಲಾಗಿತ್ತು. 
ಅಮೃತಾ ಅರೋರಾ ಶಕೀಲ್ ಎಂಬುವರನ್ನು ಮಾರ್ಚ್ 2009ರಲ್ಲಿ ಮದುವೆಯಾಗಿದ್ದರು. ಫೆ 2010ಕ್ಕೆ ಅವರಿಗೆ ಮಗುವಾಗಿತ್ತು ಎಂದು ಪ್ರಕಟಿಸಲಾಗಿತ್ತು.
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೃತಾ ಅರೋರಾ, ನನ್ನ ಬಗ್ಗೆ ಲೇಖನ ಬರೆಯುವುದಕ್ಕು ಮೊದಲು ನನ್ನ ಬಗ್ಗೆ ತಿಳಿದುಕೊಳ್ಳಬೇಕು. ಆದ್ರೆ ಆ ಲೇಖನದಲ್ಲಿ ನನ್ನ ಬಗ್ಗೆ ಸುಳ್ಳು ಸುಳ್ಳಾಗಿ ಬರೆಯಲಾಗಿದೆ. ಮದುವೆಗೆ ಮುಂಚೆ ಗರ್ಭಿಣಿ ಎಂದು ನಟಿಯರ ಪಟ್ಟಿಯಲ್ಲಿ ನನ್ನನ್ನು ಸೇರಿಸಬೇಡಿ ಎಂದು ಹೇಳಿದ್ದಾರೆ ಅಮೃತಾ ಅರೋರಾ. 
 
ಕರೀನಾ-ಸೈಫ್ ಅಲಿ ಖಾನ್, ಹಾಗೂ ಕರಿಷ್ಮಾ ಜತೆಗೆ ಉತ್ತಮ ಸಂಬಂಧ ಹೊಂದಿರುವ ಅಮೃತಾ ಅರೋರಾ, ಇತ್ತೀಚೆಗೆ ಕರೀನಾ ಕಪೂರ್ ಅವರ ಚಿತ್ರದ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ