ಒಳಉಡುಪಿನಲ್ಲಿ ಎಮಿ ಜಾಕ್ಸನ್ ಚಿತ್ತಾರ

ಶುಕ್ರವಾರ, 27 ಜನವರಿ 2017 (09:27 IST)
ಬ್ರಿಟೀಶ್ ರೂಪದರ್ಶಿ ಹಾಗೂ ಬಾಲಿವುಡ್ ನಟಿ ಎಮಿ ಜಾಕ್ಸನ್ ಆಗಾಗ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಅಂದಚೆಂದವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಬಿಕಿನಿಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಬೆಡಗಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
 
ಒಳಉಡುಪು ತೊಟ್ಟು ತಮ್ಮ ದೇಹಸಿರಿಯನ್ನು ಪ್ರದರ್ಶಿಸಿದ್ದಾರೆ. ಒಟ್ಟಾರೆ ಅಭಿಮಾನಿಗಳ ಮತ್ತು ಚಿತ್ರರಸಿಕರ ಚಿತ್ತ ಕೆಡಿಸಿದ್ದಾರೆ ಎಮಿ ಜಾಕ್ಸನ್. ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಈ ಬೆಡಗಿ ಸದ್ಯಕ್ಕೆ ಹಾಟ್ ಫೇವರಿಟ್.
 
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ 2.0. ಶಂಕರ್ ಆಕ್ಷನ್ ಕಟ್‍ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ಬರಲಿರುವ ದೀಪಾವಳಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ