ಬೆಂಗಳೂರು: ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ದಿಯಾ ಸಿನಿಮಾದಲ್ಲಿ ಚಾಕಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ ಅಂಬರ್ ಈ ಚಿದ್ರದಲ್ಲಿ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಯಶ್ ತಾಯಿ ನಿರ್ಮಾಣದ ಚೊಚ್ಚಲ ಸಿನಿಮಾ ಇದಾಗಿದೆ. ಇಂದು ಬಿಡುಗಡೆ ಆಗಿರುವ 2:24 ನಿಮಿಷದ ಟ್ರೈಲರ್ ಸಿನಿಮಾದ ರೀತಿಯೇ ಥ್ರಿಲ್ಲಿಂಗ್ ಆಗಿದೆ. ಹೆಸರೇ ಸೂಚಿಸುತ್ತಿರುವಂತೆ ಒಂದು ಹಳ್ಳಿಯ ಕತೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾ ನಿರ್ದೇಶನ ಮಾಡಿರುವುದು ಶ್ರೀರಾಜ್. ಸಿನಿಮಾನಲ್ಲಿ ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಅವಿನಾಶ್, ಮಾನಸಿ ಸುಧೀರ್, ರಘು ರಾಮನಕೊಪ್ಪ ಇನ್ನಿತರೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.
ಕೊತ್ತಲವಾಡಿ ಟ್ರೈಲರ್ನ ಆರಂಭದಲ್ಲಿ ಹಾಸ್ಯ, ಪ್ರೇಮ, ಬಂಧ, ಅನುಬಂಧಗಳ ಕತೆ ಇದಾಗಿರಬಹುದು ಎಂಬ ಅನುಮಾನ ಮೂಡಿಸುವಂತೆ ಮಾಡುವ ಟ್ರೈಲರ್ ಆ ನಂತರ ಆಕ್ಷನ್ ಲೋಕಕ್ಕೆ ಕರೆದೊಯ್ಯುತ್ತದೆ. ಹಳ್ಳಿಯೊಂದರಲ್ಲಿ ಇಬ್ಬರು ಆತ್ಮೀಯರ ಮಧ್ಯೆ ನಡೆಯುವ ಅಧಿಕಾರಕ್ಕಾಗಿ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಸುಳಿವನ್ನು ಕೊತ್ತಲವಾಡಿ ಟ್ರೈಲರ್ ನೀಡುತ್ತಿದೆ.
ಪೃಥ್ವಿ ಆಕ್ಷನ್ ಹಿರೋ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ನಲ್ಲಿ ನಟ ಗೋಪಾಲ ದೇಶಪಾಂಡೆ ಅವರೂ ಗಮನ ಸೆಳೆಯುತ್ತಾರೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವತುಂಬಿದ್ದಾರೆ. ಕಾಂತಾರದಲ್ಲಿ ಗಮನ ಸೆಳೆದಿದ್ದ ಮಾನಸಿ ಸುಧೀರ್ ಅವರೂ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.