ಆಂಧ್ರದ ಉಪ ಮುಖ್ಯಮಂತ್ರಿಯಾದ ನಂತರ ಪವನ್ ಕಲ್ಯಾಣ್ ತಮ್ಮ ಬಾಕಿಯಿರುವ ಚಿತ್ರಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇವರ ಅಭಿನಯದ ಹರಿಹರ ವೀರ ಮಲ್ಲು ಜುಲೈ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.
ನಟ ಪವನ್ ಕಲ್ಯಾಣ್ ಜೂನ್ 2024 ರಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾದರು ಮತ್ತು ಆಡಳಿತಾತ್ಮಕ ಕರ್ತವ್ಯಗಳನ್ನು ನೋಡಿಕೊಳ್ಳುವಾಗ ಚುನಾವಣೆಗೆ ಮುನ್ನ ಸಹಿ ಮಾಡಿದ ಚಲನಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರು.
ಚುನಾವಣೆಗೂ ಮುನ್ನ ಒಪ್ಪಿಕೊಂಡ ಸಿನಿಮಾವನ್ನಷ್ಟೇ ಮಾಡುತ್ತಿದ್ದಾರೆ. ಮುಂದೆ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ವೋ ಎನ್ನುವುದರ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಇದೀಗ ಪವನ್ ಕಲ್ಯಾಣ್ ಅವರು ಎಬಿಎನ್‌ಗೆ ನೀಡಿದ ಸಂದರ್ಶನದಲ್ಲಿ “ನಾನು ʼಓಜಿʼ ಚಿತ್ರೀಕರಣ ಮುಗಿಸಿದ್ದೇನೆ ಮತ್ತು ʼಉಸ್ತಾದ್ ಭಗತ್ ಸಿಂಗ್ʼ ಚಿತ್ರವನ್ನು ಪೂರ್ಣಗೊಳಿಸಲು ಸುಮಾರು ಐದು ದಿನಗಳು ಉಳಿದಿವೆ. ರಾಜಕೀಯ ಘರ್ಷಣೆಗಳಿದ್ದರೆ ನಾನು ಖಂಡಿತವಾಗಿಯೂ ಇನ್ನು ಮುಂದೆ ನಟಿಸುವುದಿಲ್ಲ ಏಕೆಂದರೆ ನನ್ನ ಆದ್ಯತೆ ಆಡಳಿತ ಮತ್ತು ಜನಸೇನಾ ಪಕ್ಷ ಎಂದಿದ್ದಾರೆ.
ಪವನ್ ರಾಜಕೀಯಕ್ಕೆ ಕಾಲಿಟ್ಟ ನಂತರ ನಟನೆಯನ್ನು ಮುಂದುವರೆಸಿದ್ದಕ್ಕಾಗಿ ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿರುವ ಬಗ್ಗೆ ಕೇಳಲಾಯಿತು. ಈ ಮೂರೂ ಚಿತ್ರಗಳಿಗೆ ಸಹಿ ಹಾಕಿದಾಗ ಚುನಾವಣೆಗೂ ಮುನ್ನವೇ ಮುಗಿಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ, ಕೆಲ ರಾಜಕೀಯ ಘಟನೆಗಳಿಂದಾಗಿ ಚುನಾವಣೆಗೂ ಮುನ್ನವೇ ಸೋತಿದ್ದೆ. ಸಿನಿಮಾ ಮುಗಿಸಲು ಇನ್ನು ಕೆಲವು ದಿನಗಳು ಬೇಕು ಎಂಬ ಕಾರಣಕ್ಕೆ ಮೂರೂ ಸಿನಿಮಾಗಳ ನಿರ್ಮಾಪಕರನ್ನು ಕ್ಷಮಿಸಿ ಎಂದು ಕೇಳಿಕೊಂಡೆ.
ನಾನು ಅಧಿಕಾರಕ್ಕೆ ಬಂದ ಮೇಲೂ ಸಿನಿಮಾ ಚಿತ್ರೀಕರಣಕ್ಕೆ ಸಮಯ ತೆಗೆದುಕೊಂಡು ದಿನಕ್ಕೆ ಎರಡು ಗಂಟೆ ಮಾತ್ರ ಮಾಡಿದ್ದೇನೆ.