ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ತೆಲುಗು ನಟಿ
ಬುಧವಾರ, 18 ಏಪ್ರಿಲ್ 2018 (06:09 IST)
ಹೈದರಾಬಾದ್ : ಇತ್ತೀಚೆಗೆ ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಂತರ ಇದೀಗ ಮತ್ತೊಬ್ಬ ತೆಲುಗು ನಟಿ 'ಕಾಸ್ಟಿಂಗ್ ಕೌಚ್' ವಿರುದ್ಧ ಧ್ವನಿ ಎತ್ತಿದ್ದಾರೆ.
ತೆಲುಗು ನಟಿ ಸಂಧ್ಯಾ ನಾಯ್ಡು ಅವರು ಇದೀಗ ಕೆಲ ನಿರ್ಮಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ಸಂಧ್ಯಾ ನಾಯ್ಡು ಅವರು ,’ಬೆಳಿಗ್ಗೆ ಶೂಟಿಂಗ್ ನಲ್ಲಿ ಅಮ್ಮ ಅಂತಾರೆ, ರಾತ್ರಿಯಾಗುತ್ತಿದ್ದಂತೆ ಮಂಚಕ್ಕೆ ಕರೀತಾರೆ. ಇಂಡಸ್ಟ್ರಿಯಲ್ಲಿ ಎಷ್ಟರ ಮಟ್ಟಿಗೆ ಕಾಮಾಂಧರು ಇದ್ದಾರೆ ಅಂದ್ರೆ, ಕೇವಲ 18 ವರ್ಷದ ಯುವತಿಯರನ್ನ ಮಾತ್ರವಲ್ಲ, ನಮ್ಮಂತ ಆಂಟಿಗಳನ್ನ ಕೂಡ ಬಿಡುವುದಿಲ್ಲ. 60 ವರ್ಷದ ಮುದುಕಿಯರನ್ನ ಕೂಡ ಬಿಡುವುದಿಲ್ಲ ಈ ಕಚಡಾಗಳು ಎಂದು ಕಿಡಿಕಾರಿದ್ದಾರೆ.
ಕಳೆದ 10 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ನಾಯ್ಡು ಅವರು, ಹಲವು ಚಿತ್ರಗಳಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ