ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಮಿಲ್ಕಿ ಬ್ಯೂಟಿ ತಮನ್ನಾ

ಶನಿವಾರ, 14 ಏಪ್ರಿಲ್ 2018 (12:52 IST)
ಹೈದರಾಬಾದ್ : ಸಿನಿಮಾರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಇದೀಗ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಅವರ ಹೆಸರು ಆಯ್ಕೆಯಾಗಿದೆ.


ಕಳೆದ ವರ್ಷ ತೆರೆ ಕಂಡು ಬಾರೀ ಯಶಸ್ಸು ಗಳಿಸಿದ್ದ ಬಾಹುಬಲಿ ಸಿನಿಮಾದಲ್ಲಿನ ಅವಂತಿಕಾ ಪಾತ್ರದಲ್ಲಿ ವೀರ ನಾರಿಯಾಗಿ ಸಾಮಾಜಿಕ ಒಳತಿಗಾಗಿ ಯುದ್ದಕ್ಕೆ ಸನ್ನದ್ದರಾಗುವ ನಿಟ್ಟಿನಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಪಾತ್ರ ಗಮನಾರ್ಹ ವಾಗಿರುವುದರಿಂದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರು ತಮನ್ನಾ ಅವರ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ದಾದಾ ಸಾಹೇಬ್ ಪಾಲ್ಕೆ ಫೌಂಡೇಶನ್ ತನ್ನ ಹೆಸರನ್ನು ಆಯ್ಕೆ ಮಾಡಿರುವುದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ತಮನ್ನಾ ಅವರು,’ ಇದು ನನಗೆ ಲಭಿಸಿರುವ ಅತ್ಯುನ್ನತ ಗೌರವ ಹಾಗು ನನ್ನ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಫೌಂಡೇಷನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ