ಮದುವೆಗೆ ಆಮಂತ್ರಿಸಿದ ಮೈಸೂರಿನ ಜೋಡಿಗೆ ಸರ್ಪ್ರೈಸ್ ಕೊಟ್ಟ ಅನುಷ್ಕಾ ಶರ್ಮಾ

ಶುಕ್ರವಾರ, 19 ನವೆಂಬರ್ 2021 (16:47 IST)
ಮುಂಬೈ: ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೈಸೂರಿನ ಅಭಿಮಾನಿಯೊಬ್ಬರಿಗೆ ಮದುವೆಗೆ ಸರ್ಪೈಸ್ ಕೊಟ್ಟಿದ್ದಾರೆ.

ನಟಿ ಅನುಷ್ಕಾಗೆ ಮೈಸೂರಿನ ನಯನಾ ಮತ್ತು ರುದ್ರೇಶ್ ಜೋಡಿ ಕನ್ನಡದಲ್ಲಿ ಬರೆದ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಕಳುಹಿಸಿದ್ದರು.

ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅನುಷ್ಕಾ ನವ ಜೋಡಿಗೆ ಶುಭ ಹಾರೈಸಿ ಅಚ್ಚರಿ ನೀಡಿದ್ದಾರೆ. ಬೆಂಗಳೂರಿನ ನಂಟು ಹೊಂದಿರುವ ಅನುಷ್ಕಾ ಈಗ ಕನ್ನಡ ಆಮಂತ್ರಣ ಪತ್ರಿಕೆ ಶೇರ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ