ಸೂರ್ಯವಂಶಿ ವರ್ಸಸ್ ಅನ್ನಾತೆ: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಯಾರು ನಂ.1?

ಗುರುವಾರ, 18 ನವೆಂಬರ್ 2021 (12:20 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಅನ್ನಾತೆ’ ಮತ್ತು ಅಕ್ಷಯ್ ಕುಮಾರ್ ನಾಯಕರಾಗಿರುವ ಸೂರ್ಯವಂಶಿ ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗಿತ್ತು. ಈ ಪೈಕಿ ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ಮೇಲುಗೈ ಸಾಧಿಸಿದೆ ನೋಡೋಣ.

ರಜನಿ ಅಭಿನಯದ ಅನ್ನಾತೆ ದಸರಾ ಸಮಯದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ 13 ದಿನಗಲ್ಲಿ 225 ಕೋಟಿ ರೂ. ಬಾಚಿಕೊಂಡಿದೆ. ದಸರಾ ಜೊತೆಗೆ ದೀಪಾವಳಿ ರಜೆ ಸಿನಿಮಾ ಗಳಿಕೆಗೆ ಪ್ಲಸ್ ಪಾಯಿಂಟ್ ಆಗಿದೆ.

ಇನ್ನು, ಸೂರ್ಯವಂಶಿ ವಿಷಯಕ್ಕೆ ಬರುವುದಾದರೆ, ಈ ಸಿನಿಮಾ ಬಿಡುಗಡೆಯಾಗಿ 12 ದಿನ ಕಳೆದ ಮೇಲೆ ಕಲೆಕ್ಷನ್ ಮಾಡಿದ್ದ ಬರೋಬ್ಬರಿ 250 ಕೋಟಿ ರೂ. ಈ ಮೂಲಕ ಲಾಕ್ ಡೌನ್ ನಿಂದ ತತ್ತರಿಸಿದ್ದ ಬಾಲಿವುಡ್ ಗೆ ಅಕ್ಷಯ್ ಸಿನಿಮಾ ಎರಡನೇ ಬಾರಿಗೆ ಚೇತರಿಕೆ ನೀಡಿದೆ. ಇದಕ್ಕೂ ಮೊದಲು ಅಕ್ಷಯ್ ಅಭಿನಯಿಸಿದ್ದ ಬೆಲ್ ಬಾಟಂ ಸಿನಿಮಾ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ