ಸಾಯಿರಾ ಬಾನು ಪರ ವಕೀಲ ವಂದನಾ ಶಾ ಈ ವಿಚಾರವನ್ನು ಖಿಚಿತಪಡಿಸಿದ್ದಾರೆ. 1995 ರಲ್ಲಿ ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳೂ ಇದ್ದಾರೆ. ಇದೀಗ ಮೂರು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ತೀರ್ಮಾನಿಸಿದ್ದಾರೆ.
ಮದುವೆಯಾಗಿ ಇಷ್ಟು ವರ್ಷಗಳ ನಂತರ ಸಾಯಿರಾ ತಮ್ಮ ಪತಿ ಎಆರ್ ರೆಹಮಾನ್ ರಿಂದ ಬೇರ್ಪಡುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿರ್ಧಾರವನ್ನು ಅವರು ಸಾಕಷ್ಟು ಭಾವನಾತ್ಮಕ ಒತ್ತಡದ ನಂತರ ತೆಗೆದುಕೊಂಡಿದ್ದಾರೆ. ಒಬ್ಬರಿಗೊಬ್ಬರ ಪ್ರೀತಿಗಿಂತ ವಿರಸದ ಅಂತರವೇ ಹೆಚ್ಚಾಗಿದೆ. ಹೀಗಾಗಿ ಸಾಯಿರಾ ನೋವು ಮತ್ತು ದುಃಖದಿಂದಲೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಂದನಾ ಶಾ ಹೇಳಿದ್ದಾರೆ.