ಪಿಎಂ ಸ್ಥಾನಕ್ಕೆ ರಾಹುಲ್ ಗಾಂಧಿ ಸೂಕ್ತವೇ?,ವೋಟ್ ಮಾಡಲು ದೇಶದ ಜನರೇನು ಮೂರ್ಖರಲ್ಲ :ಓಂ ಪುರಿ
ಗುರುವಾರ, 2 ಜೂನ್ 2016 (15:13 IST)
ಹಿಂದಿನ ಕಾಂಗ್ರೆಸ್ ಆಳ್ವಿಕೆಯನ್ನು ಬಹಿರಂಗವಾಗಿ ಟೀಕಿಸಿರುವ ನಟ ಓಂ ಪುರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಸೂಕ್ತವೇ?, ವೋಟ್ ಮಾಡಲು ದೇಶದ ಜನರೇನು ಮೂರ್ಖರಲ್ಲ ಎಂದು ನಟ ಓಂ ಪುರಿ ಹೇಳಿದ್ದಾರೆ.
ಅದಲ್ಲದೇ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಮಾಡುವುದರ ಬಗ್ಗೆ ಸೋನಿಯಾ ಕನಸು ಕಾಣುತ್ತಿದ್ದಾರೆ, ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಅವರನ್ನು ಪ್ರಧಾನಿ ಮಾಡುವ ಯೋಚನೆಯಲ್ಲಿದ್ದಾರೆ.
ಆದರೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತವೇ..? ರಾಹುಲ್ ವಯಸ್ಸು ಹಾಗೂ ಅನುಭವ ನೋಡಿ.. ನಾವೇನು ಮೂರ್ಖರಾ? ಎಂದು ನಟ ಓಂ ಪುರಿ ಪ್ರಶ್ನೆ ಮಾಡಿದ್ದಾರೆ..
ಕೇಸರಿ ಪಕ್ಷ ಹೊರೆತುಪಡಿಸಿದರೆ ನಮಗೆ ಬೇರೆ ಆಯ್ಕೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ಸೇರುವ ಬಗ್ಗೆ ಮೂನ್ಸುಚನೆ ನೀಡಿದ್ದಾರೆ.
ಅದಲ್ಲದೇ ಹಿಂದಿನ ಕಾಂಗ್ರೆಸ್ ಆಡಳಿತದ ಬಗ್ಗೆ ಟೀಕಿಸಿರುವ ಅವರು, ಸೋನಿಯಾ ಮನಮೋಹನ್ ಸಿಂಗರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು 15 ವರ್ಷಗಳ ಕಾಲ ದಬ್ಬಾಳಿಕೆ ನಡೆಸಿದ್ದರು ಎಂದು ಓಂ ಪುರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ