ಕಾಲಿವುಡ್ ಸ್ಟಾರ್ ನಟ ಆರ್ಯಾ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿ

ಸೋಮವಾರ, 2 ಜುಲೈ 2018 (12:25 IST)
ಚೆನ್ನೈ : ಕಾಲಿವುಡ್ ಸ್ಟಾರ್ ನಟ ಆರ್ಯಾ ಅವರ  ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.


2011ರಲ್ಲಿ ಬಿಡುಗಡೆಗೊಂಡ   ನಿರ್ದೇಶಕ ಬಾಲಾ ಅವರ ನಿರ್ದೇಶನದಲ್ಲಿ ಮೂಡಿಬಂದ  ‘ಅವನ್ ಇವನ್’ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟರಾದ ಆರ್ಯಾ ಹಾಗು ವಿಶಾಲ್ ಅವರು ನಟಿಸಿದ್ದು, ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಆದರೆ ಈ ಚಿತ್ರದ ಕುರಿತಾಗಿ ಸಿಂಗಮತ್ತಿ ಜಮೀನ್ ಆದಾರವಾಗಿ ತಪ್ಪಾಗಿ ಚಿತ್ರಿಸಿದ್ದಾರೆಂದು ಅಂದು ಸಾರ್ವಜನಿಕ ನ್ಯಾಯಾಲಯದಲ್ಲಿ ನಟ ಆರ್ಯಾ ಹಾಗು ನಿರ್ದೇಶಕ ಬಾಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು.


ಈ ಪ್ರಕರಣದ ತೀರ್ಪು ಈಗ ಹೊರಬಿದ್ದಿದ್ದು, ಎಲ್ಲಾ ಸಾಕ್ಷ್ಯಾದಾರಗಳನ್ನು ಪರಿಶೀಲಿಸಿದ ನ್ಯಾಯಾಲಯ  ಆರ್ಯಾ ಹಾಗು ಬಾಲಾ ಅವರು ತಪ್ಪು ಮಾಡಿದ್ದಾರೆಂದು ನಿರ್ಧರಿಸಿ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ