ತಮಿಳು ಬಿಗ್ ಬಾಸ್ ಶೋ ನ ಎರಡನೇ ಸೀಸನ್ ಗೂ ಎದುರಾಗಿದೆ ಸಂಕಷ್ಟ
ಶನಿವಾರ, 30 ಜೂನ್ 2018 (13:30 IST)
ಚೆನ್ನೈ : ವಿವಾದಗಳ ನಡುವೆಯೂ ಮೊದಲನೇ ಸೀಸನ್ ನನ್ನು ಯಶಸ್ವಿಯಾಗಿ ಮುಗಿಸಿದ ತಮಿಳು ಬಿಗ್ ಬಾಸ್ ಶೋ ನ ಈಗ ಎರಡನೇ ಸೀಸನ್ ಗೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಹೌದು. ‘ಹಿಂದೂ ಮಕ್ಕಳ್ ಕಚ್ಚಿ’ ಎನ್ನುವ ಸಂಘಟನೆ ಬಿಗ್ಬಾಸ್ ವಿರುದ್ಧ ಸಿಡೆದೆದ್ದಿದೆ. ಅಲ್ಲದೇ ಬಿಗ್ ಬಾಸ್ ನಿರೂಪಕ ನಟ ಕಮಲ್ ಹಾಸನ್ ವಿರುದ್ದವೂ ಕೂಡ ಈ ಸಂಘಟನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಬಿಗ್ಬಾಸ್ ಸ್ಪರ್ಧಿಗಳು ಅರೆಬರೆ ಬಟ್ಟೆ ಬಟ್ಟೆ ಧರಿಸುತ್ತಾರೆ, ಅಸಂಬದ್ಧ ಸಂಭಾಷಣೆ ನಡೆಸುತ್ತಾರೆ. ಇದು ತಮಿಳು ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಈ ಶೋ ಮೂಲಕ ತಮಿಳು ಸಂಸ್ಕೃತಿಯನ್ನು ಹಾಳುಗೆಡವಲು ಹೊರಟಿದ್ದಾರೆ ಎಂದು ಆರೋಪಿಸಿ ಈ ಕೂಡಲೇ ಬಿಗ್ಬಾಸ್ ಶೋ ಬ್ಯಾನ್ ಮಾಡಬೇಕೆಂದು ಹಿಂದೂ ಮಕ್ಕಳ ಕಚ್ಚಿ ಸಂಘಟನೆ ಒತ್ತಾಯಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ