ಇಂದಿಗೆ ಬಿಗ್‌ಬಿ 'ಮೇಜರ್ ಸಾಬ್' 18 ವರ್ಷದ ಪೊರೈಸಿದ ಚಿತ್ರ
ಸೋಮವಾರ, 27 ಜೂನ್ 2016 (17:07 IST)
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಯದ ಮೇಜರ್ ಸಾಬ್ ಚಿತ್ರ 18 ವರ್ಷಗಳನ್ನು ಪೂರೈಸಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟರ್ ಫಾಲೋವರ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟ್ ಮಾಡುತ್ತಿದ್ದಾರೆ.
ಈ ವೇಳೆ ಬಿಗ್‌ಬಿ ಫಾಲೋವರ್ಸ್ ಈ ಬಗ್ಗೆ ಶುಭಾಷಯ ತಿಳಿಸಿದ್ದಾರೆ. 18 ವರ್ಷ ಪೊರೈಸಿದ ಚಿತ್ರಕ್ಕೆ ಶುಭಾಷಯ ಸರ್ ಅಂತ ಅಮಿತಾಬ್‌ಗೆ ಫಾಲೋವರ್ಸ್ ಟ್ವಿಟ್ ಮಾಡಿದ್ದಾರೆ.
ಇನ್ನೂ ಫ್ಯಾನ್ ಕ್ಲಬ್ ಪೇಜ್‌ನಲ್ಲೂ ಈ ಬಗ್ಗೆ ಬರೆಯಲಾಗಿದೆ. 18 ವರ್ಷ ಕಂಪ್ಲೀಟ್ ಮಾಡಿದ ಮೇಜರ್ ಸಾಬ್... ಮೇಜರ್ ಫೈಟ್ ಫಾರ್ ಲವ್ ಎಂದು ಟ್ವಿಟ್ ಮಾಡಲಾಗಿದೆ.
ಈ ಚಿತ್ರವನ್ನು ತನು ಆನಂದ ನಿರ್ದೇಶನ ಮಾಡಿದ್ದರು. ಮುಖ್ಯ ಪಾತ್ರದಲ್ಲಿ ಸೋನಾಲಿ ಬೇಂದ್ರೆ ಕಾಣಿಸಿಕೊಂಡಿದ್ದರು.
ಅಲ್ಲದೇ ಈ ಚಿತ್ರದಲ್ಲಿ ಆಶಿಸ್ ವಿದ್ಯಾರ್ಥಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಹೆಚ್ಚು ಗಳಿಕೆ ಕಂಡಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ