ಮಾಲ್ಡೀವ್ಸ್‌ನಲ್ಲಿ ಐಶಾನಿ ಶರ್ಮಾ ಮೋಹಕ ಮೈಮಾಟ

ಮಂಗಳವಾರ, 7 ಫೆಬ್ರವರಿ 2017 (12:21 IST)
ಬಾಲಿವುಡ್‌ನ ಬಿಕಿನಿ ಬೇಬಿ ಈಗ ಮಾಲ್ಡೀವ್ಸ್ ದ್ವೀಪದಲ್ಲಿದ್ದಾರೆ. ಆಗಾಗ ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಈ ಬೆಡಗಿ ಈಗ ಮಾಲ್ಡೀವ್ಸ್‌ನಲ್ಲಿ ತನ್ನ ಮೈಮಾಟದ ಹೊಸ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಪಡ್ಡೆಗಳ ಮೈಯಲ್ಲಿ ಕರೆಂಟ್ ಹರಿಸಿದ್ದಾರೆ.
 
ಮಾಲ್ಡೀವ್ಸ್‌ನ ವಾಟರ್ ವಿಲ್ಲಾದಲ್ಲಿ ಹಾಯಾಗಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಐಶಾನಿ ಶರ್ಮಾ, ಅಲ್ಲಿಂದಲೇ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುತ್ತಿದ್ದಾರೆ. ಅವರಿಗೆ ಫ್ಯಾನ್ ಫಾಲೋಯಿಂಗ್ ಸಹ ಜೋರಾಗಿಯೇ ಇದೆ.
 
ಸದ್ಯಕ್ಕೆ ಡೇವಿಡ್ ಧವನ್ ಅವರ ಜುಡ್ವಾ 2 ಚಿತ್ರದಲ್ಲಿ ಬಣ್ಣ ಹಚ್ಚಿರುವ ಐಶಾನಿ, ಇತ್ತೀಚೆಗಷ್ಟೆ ಇಕ್ ವಾರಿ ಎಂಬ ಆಲ್ಬಂ ಬಿಡುಗಡೆ ಮಾಡಿದ್ದರು. ಕಿಂಗ್ ಫಿಶರ್ ಕ್ಯಾಲೆಂಡರ್‌ನ ಟೂಪೀಸ್ ಬೆಡಗಿಯರಲ್ಲಿ ಐಶಾನಿ ಸಹ ಒಬ್ಬರು. ಇವರ ಅಕ್ಕ ನೇಹಾ ಶರ್ಮಾ ಸಹ ಬಣ್ಣದ ಜಗತ್ತಿನಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ