ಬೆಂಗಳೂರು: ಸಿನಿಮಾ ತಂಡದ ಮೇಲೆ ಸಾಲು ಮರ ತಿಮ್ಮಕ್ಕ ದೂರು ನೀಡಿದ ಘಟನೆ ವರದಿಯಾಗಿದೆ. ಪರಿಸರ ರಕ್ಷಣೆಯಲ್ಲಿ ಅವರ ಕೊಡುಗೆಯನ್ನು ಸಾಲು ಮರದ ತಿಮ್ಮಕ್ಕರ ಸಾಧನೆಯನ್ನು ಸಿನಿಮಾ ಮಾಡಲು ಹೊರಟ ಚಿತ್ರತಂಡದ ವಿರುದ್ಧ ಅವರು ದೂರನ್ನು ನೀಡಿದ್ದಾರೆ. ಈ ಸಿನಿಂಆಗೆ ವೃಕ್ಷ ಮಾತೆ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಈ ಸಿನಿಮಾ ಮಾಡಬಾರದು ಎಂದು ಸ್ವತಃ ತಿಮ್ಮಕ್ಕ ಅವರೇ ಫಿಲ್ಮ್ ಚೇಂಬರ್ಗೆ ಬಂದು ದೂರು ಕೊಟ್ಟಿದ್ದಾರೆ.
ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವೃಕ್ಷಮಾತೆ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಒರಟ ಶ್ರೀ ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದೇಶ್ ಅವರು ಬರೆದಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಆದರೆ, ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರೇ ವಿರೋಧ ಹೊರಹಾಕಿದ್ದಾರೆ.
ಎರದು ದಿನಗಳ ಹಿಂದೆ ಚಿತ್ರತಂಡ ಶೂಟಿಂಗ್ ಮಾಡುತ್ತಿತ್ತು. ಈ ವೇಳೆ ತಂಡವನ್ನು ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೃಕ್ಷಮಾತೆ ಸಿನಿಮಾಗೆ ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಈಗ ಫಿಲ್ಮ್ ಚೇಂಬರ್ಗೆ ಆಗಮಿಸಿ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ.