ಶಶಿ ಕಪೂರ್ ಹೆಸರಲ್ಲಿ ಬಯಾಗ್ರಫಿ ಬಿಡುಗಡೆ

ಶುಕ್ರವಾರ, 6 ಮೇ 2016 (17:57 IST)
ಹಿರಿಯ ನಟ ಶಸಿ ಕಪೂರ್ ಹೆಸರಲ್ಲಿ ಬಯಾಗ್ರಫಿ ಬಿಡುಗಡೆಯಾಗಿದೆ.. ಅವರ ವೈಯಕ್ತಿಕ  ಬದುಕು ಹಾಗೂ ಖಾಸಗಿ ಜೀವನದ ಕುರಿತು ಬಯಾಗ್ರಫಿ ರಿಲೀಸ್ ಮಾಡಲಾಗಿದೆ. 
ಈ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಶೇರ್ ಮಾಡಿದ್ದಾರೆ. ದಿ ಹೌಸ್‌ಹೋಲ್ಡರ್ ಎಂಬ ಜೀವನ ಕಥೆಯನ್ನು ಒಳಗೊಂಡ ಬಯಾಗ್ರಫಿ ಬಿಡುಗಡೆ ಮಾಡಿದೆ. ಇದನ್ನು ಬರೆದಿದ್ದಾರೆ ಅಸೀಮ್ ಚಬ್ರಾ.. 
 
ಮೊನ್ನೆ ನಟ ಶಸಿ ಕಪೂರ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು..  ಅಲ್ಲದೇ ವಕ್ತ್, ದಿವಾರ್, ದಾದಾ ಸಾಹೇಬ್, ತ್ರಿಶುಲ್ ಮತ್ತು ಉಸ್ತವ್ ಚಿತ್ರಗಳಲ್ಲಿ ಶಶಿ ಕಪೂರ್ ಕೆಲಸ ಮಾಡಿದ್ದರು.. 78 ವರ್ಷದ ಶಶಿಕಪೂರ್ ಬಾಲಿವುಡ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅದರಲ್ಲೂ 1948 ರಲ್ಲಿ ತೆರೆ ಕಂಡ ಆಗ್,1951ರ ಅವಾರಾ ಮುಂತಾದ ಸಿನಿಮಾಗಳಲ್ಲಿನ ಶಶಿ ಕಪೂರ್ ಅವರ ಅಭಿನಯವನ್ನು ಯಾರೊಬ್ಬರು ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಇಂತಹ ನಟನ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನು ಹರಡಿಸೋದು ಎಷ್ಟರಮಟ್ಟಿಗೆ ಸರಿ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ