ನೀವು ಮದುವೆಯಾಗಿದ್ದೀರಿ,ಇನ್ನು ಮಗು ಪಡೆದಿಲ್ಲ ಎಂದು ಕೇಳುವುದು ತುಂಬ ಹಾಸ್ಯಾಸ್ಪದ-ಬಿಪಾಶಾ
ಬುಧವಾರ, 28 ಮಾರ್ಚ್ 2018 (06:07 IST)
ಮುಂಬೈ : ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನ ಕ್ಯೂಟ್ ಕಪಲ್ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇವರು, ತಮ್ಮ ಸುಂದರ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗಷ್ಟೇ ಬಿಪಾಶಾ ಅವರು ಆಸ್ಪತ್ರೆಯೊಂದರ ಎದುರು ನಿಂತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿದ ತಕ್ಷಣ ಜನರು ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಡಿಸಿದರು. ಆದರೆ , ಬಿಪಾಶಾ ಮಾಧ್ಯಮಗಳ ವಕ್ತಾರ ಈ ರೂಮರ್ ತಳ್ಳಿಹಾಕಿದ್ದರು.
ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಬಿಪಾಶಾ ಅವರು ತಮ್ಮ ಬಗ್ಗೆ ಕೇಳಿಬಂದ ಈ ಗಾಸಿಪ್ ಗೆ ಖಡಕ್ ಆಗಿ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡದ ಅವರು,’ ಮಗುವನ್ನು ಪಡೆಯುವುದು ಒಂದು ಸುಂದರ ಫೀಲಿಂಗ್ ಎಂದು ನಂಗೆ ಗೊತ್ತು . ಆದರೆ ನೀವು ಮದುವೆಯಾಗಿದ್ದೀರಿ, ಇನ್ನು ಮಗು ಪಡೆದಿಲ್ಲ ಎಂದು ಕೇಳುವುದು ತುಂಬ ಹಾಸ್ಯಾಸ್ಪದ . ಇದು ಮಹಿಳೆಯರಿಗೆ ತುಂಬ ದುಃಖಕರ ಸಂಗತಿ’ ಎಂದು ಹೇಳಿದ್ದಾರೆ .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ