ಹಿಂದೂಗಳ ಹೋಳಿ ಹಬ್ಬದ ಬಗ್ಗೆ ಅವಹೇಳನ: ನಿರ್ದೇಶಕಿ ಫರಾ ಖಾನ್ ವಿರುದ್ಧ ಕೇಸ್ (ವಿಡಿಯೋ)

Krishnaveni K

ಶನಿವಾರ, 22 ಫೆಬ್ರವರಿ 2025 (11:07 IST)
Photo Credit: X
ಮುಂಬೈ: ಹಿಂದೂಗಳು ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಾಲಿವುಡ್ ನಿರ್ದೇಶಕಿ ಫರಾ ಖಾನ್ ವಿರುದ್ಧ ಕೇಸ್ ದಾಖಲಾಗಿದೆ.

ಬಣ್ಣದ ಹಬ್ಬ ಹೋಳಿ ‘ಸಂಸ್ಕೃತಿಯಿಲ್ಲದ ಮನುಷ್ಯರು’ (ಚಪ್ರಿಗಳು)ಆಚರಿಸುವ ಹಬ್ಬ ಎಂದು ಫರಾ ಖಾನ್ ಹೇಳಿದ್ದರು. ತನ್ನ ಕುಕ್ಕಿಂಗ್ ಶೋ ಮಾಸ್ಟರ್ ಶೆಫ್ 2025 ರ ಲೇಟೆಸ್ಟ್ ಎಪಿಸೋಡ್ ನಲ್ಲಿ ಫರಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಾತಿನ ನಡುವೆ ಹೋಳಿ ಹಬ್ಬ ಎಂದರೆ ಚಪ್ರಿಗಳು ಮಾಡುವ ಹಬ್ಬ ಎಂದಿದ್ದರು. ಇದೀಗ ವಿಕಾಸ್ ಫತಾಕ್ ಎಂಬವರು ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಫರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಸಾರಾ ಹೇಳಿಕೆಗೆ ನೆಟ್ಟಿಗರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಹೇಳಿಕೆಗೆ ಫರಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ವಿಕಾಸ್ ದೂರು ನೀಡಿದ್ದು, ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.

"Sare chhapri ladkon ka pasandeeda festival Holi hi hota hai" (Holi is the favorite festival of all lecherous boys)

-Farah Khan, whose brother Sajid Khan is one of the biggest sexual predators of Urduwood, and who herself directed tr@sh like 'Main Hoo Na' depicting ex-Indian… pic.twitter.com/BZcahuEmr2

— HinduPost (@hindupost) February 20, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ