ಹೋಳಿ ಹಬ್ಬವೆಂದು ನೀರು ಪೋಲು ಮಾಡಿದ್ರೆ ಬೀಳುತ್ತೆ ದಂಡ

Krishnaveni K

ಶನಿವಾರ, 23 ಮಾರ್ಚ್ 2024 (15:48 IST)
Photo Courtesy: Twitter
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಿಲ್ಲದೇ ಬರಗಾಲದ ಪರಿಸ್ಥಿತಿಯಿದೆ. ಹೀಗಿರುವಾಗ ಹೋಳಿ ಹಬ್ಬದ ನೆಪದಲ್ಲಿ ನೀರು ಪೋಲು ಮಾಡುವಂತಿಲ್ಲ ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

ಸೋಮವಾರ ಅಂದರೆ ಮಾರ್ಚ್ 25 ರಂದು ಹೋಳಿ ಹಬ್ಬವಿದೆ. ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೆ ಬಣ್ಣದ ನೀರು ಎರಚಿ ಸಂಭ್ರಮಾಚರಣೆ ಮಾಡುವುದು ರೂಢಿ. ಆದರೆ ಈ ಬಾರಿ ನೀರಿಲ್ಲದೇ ಬಣ್ಣ ಎರಚಿ ಹಬ್ಬ ಮಾಡಿ ಎಂದು ಜಲಮಂಡಳಿ ಸೂಚನೆ ನೀಡಿದೆ. ಬಣ್ಣದ ಹಬ್ಬಕ್ಕಾಗಿ ನೀರು ಪೋಲು ಮಾಡಿದರೆ ತಕ್ಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಎಲ್ಲೆಡೆ ಕುಡಿಯುವ ನೀರಿಗೂ ಹಾಹಾಕಾರವಿದೆ. ಹೀಗಿರುವಾಗ ವಾಣಿಜ್ಯ ಉದ್ದೇಶದಿಂದ ನಡೆಯುವ ಹೋಳಿ ಹಬ್ಬದ ವೇಳೆ ನೀರು ಪೋಲು ಮಾಡಿದರೆ 5000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಹೋಳಿ ಈವೆಂಟ್ ನೆಪದಲ್ಲಿ ಕುಡಿಯುವ ನೀರು, ಕಾವೇರಿ ನೀರು, ಬೋರ್ ವೆಲ್ ನೀರು ಬಳಸಿದರೆ ಶಿಕ್ಷೆಗೆ ಗುರಿಯಾಗಬೇಕಾದೀತು.

ಒಂದು ವೇಳೆ ನೀರು ಪೋಲು ಮಾಡುವುದು ಗಮನಕ್ಕೆ ಬಂದರೆ ದಂಡದ ಜೊತೆಗೆ ಕಾವೇರಿ ನೀರು ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ. ನೀರಿನ ಅಭಾವವಿರುವಾಗ ಅನಗತ್ಯ ಪೋಲು ಮಾಡದಂತೆ ಎಚ್ಚರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ