ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಸೋಷಿಯಲ್ ಮೀಡಿಯಾವನ್ನು ಮುಂದಿನ ದಿನಗಳಲ್ಲಿ ವಿಜಯಲಕ್ಷ್ಮಿ ಹ್ಯಾಂಡಲ್ ಮಾಡುವುದಾಗಿ ಹೇಳಿದ್ದಾರೆ.
ನಿನ್ನೆ ಡೆವಿಲ್ ಸಿನಿಮಾ ಸಂಬಂದ ದರ್ಶನ್ ಜೈಲಿನಿಂದಲೇ ಕಳುಹಿಸಿರುವ ಸಂದೇಶವನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡಿದ್ದರು. ಇದೀಗ ದರ್ಶನ್ ಅವರ ಸೋಶಿಯಲ್ ಮೀಡಿಯಾವನ್ನು ತಾನು ನಿಭಾಯಿಸುವುದಾಗಿ ವಿಜಯಲಕ್ಷ್ಮಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿರುವುದರಿಂದ ನಟ ದರ್ಶನ್ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಹಿಂದೆಯೂ ಗಂಡನ ಬಿಡುಗಡೆಗಾಗಿ ಕಾನೂನು ಹೋರಾಟ ನಡೆಸಿ, ಅವರನ್ನು ಹೊರತರುವಲ್ಲಿ ವಿಜಯಲಕ್ಷ್ಮಿ ಪಾತ್ರ ವಹಿಸಿದ ಮಹತ್ವದಿದ್ದೆ. ಇದೀಗ ಮತ್ತೇ ಜೈಲು ಸೇರಿರುವ ದರ್ಶನ್ ಅವರ ಸಿನಿಮಾ ಅಪ್ಡೇಟ್ ಅನ್ನು ಅವರ ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ವಿಜಯಲಕ್ಷ್ಮಿ ಪೋಸ್ಟ್‌ನಲ್ಲಿ ಹೀಗಿದೆ:
ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ಹಿಂತಿರುಗುವವರೆಗೆ, ಅವರ ಪರವಾಗಿ ನಾನು ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತೇನೆ. ಅವರ ಚಲನಚಿತ್ರ ಪ್ರಚಾರಗಳನ್ನ ಹಂಚಿಕೊಳ್ಳುತ್ತೇನೆ. ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಬರೆದುಕೊಂಡಿದ್ದಾರೆ.