ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ
ಮುಂಬೈ: ಹಿರಿಯ ನಟ ದಾದಾ ಸಾಹೇಬ್ ಪುರಸ್ಕೃತ ದಿಲೀಪ್ ಕುಮಾರ್ ಅಸ್ವಸ್ಥರಾಗಿದ್ದು, ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. 93 ವರ್ಷದ ದಿಲೀಪ್ ಕುಮಾರ್ ಕಾಲಿನ ಊತಕ್ಕೊಳಗಾದ ಹಿನ್ನಲೆಯಲ್ಲಿ ಲೀಲಾವತಿ ಆಸ್ಪತ್ರೆ ಸೇರಿದ್ದಾರೆ.
“ಅವರ ಬಲಗಾಲು ಊದಿಕೊಂಡಿದೆ. ಹೀಗಾಗಿ ಪರೀಕ್ಷೆ ನಡೆಸಲು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ರೊಟೀನ್ ಚೆಕ್ ಅಪ್ ಗೆ ಒಳಗಾಗಲಿದ್ದಾರೆ. ಗಾಬರಿಯಾಗುವ ಅಗತ್ಯವಿಲ್ಲ.” ಎಂದು ದಿಲೀಪ್ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.
ಡಿಸೆಂಬರ್ 11 ಕ್ಕೆ ಹಿರಿಯ ನಟ 94 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಷ್ಟರೊಳಗೆ ಅವರು ಮನೆಗೆ ಹಿಂತಿರುಗಬಹುದೆಂದು ಪತ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.