ಬ್ರಹ್ಮೋತ್ಸವಂ ಸಿನಿಮಾ ಸೆಟ್ ಏರಿದಾಗಿನಿಂದ ಸಾಕಷ್ಟು ಸುದ್ದಿಯಲ್ಲಿತ್ತು. ಮಹೇಶ್ ಬಾಬು ಸಿನಿಮಾ ಅಂದ್ರೆ ಅಲ್ಲಿ ಸಾಕಷ್ಟು ಹೊಸತನ ಮತ್ತು ಅದ್ದೂರಿತನವಿರುತ್ತೆ. ಅದೇ ರೀತಿ ಒಂದೇ ಸಾಂಗ್ ಗೆ ನಿರ್ಮಾಪಕರು 3.5ಕೋಟಿ ರೂಪಾಯಿಯನ್ನ ಖರ್ಚು ಮಾಡಿದ್ರು. ಸೂಪರ್ ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡುವಾಗ ದುಡ್ಡಿಗೆ ಲೆಕ್ಕ ಇಡಬಾರದು ಅಂತ 500ಜನ ಕೋ ಆರ್ಟಿಸ್ಟ್ ಗಳನ್ನ ಹಾಕ್ಕೊಂಡು ಹಾಡನ್ನ ಚಿತ್ರೀಕರಿಸಿದ್ರು.
ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಬ್ರಹ್ಮೋತ್ಸವಂನಲ್ಲಿ ಮಹೇಶ್ ಬಾಬು ಜೊತೆ ಸಮಂತ, ಕಾಜಲ್ ಕಾಣಿಸಿಕೊಂಡಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಮಹೇಶ್ ಬಾಬು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಮೊತ್ತೊಂದು ಎಂಟರ್ ಟೈನ್ ಸಿನಿಮಾ ನೋಡೋದಕ್ಕೆ ಕಾತರದಿಂದ ಕಾಯ್ತಿದ್ದಾರೆ.