ಬಾಲ್ಯದ ಫೊಟೋ ಶೇರ್ ಮಾಡಿದ ಅಮಿರ್ ಖಾನ್

ಸೋಮವಾರ, 27 ಜೂನ್ 2016 (17:42 IST)
ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ತಮ್ಮ ಬಾಲ್ಯದ ಫೊಟೋ ಶೇರ್ ಮಾಡಿದ್ದಾರೆ. ಆದ್ರೆ ಅಮಿರ್ ಖಾನ್ ತಮ್ಮ ಮುಂಬರುವ ಚಿತ್ರ ದಂಗಲ್ ಚಿತ್ರಕ್ಕಾಗಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿರ್ ಖಾನ್ ವಿಭಿನ್ನವಾಗಿ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಬೇಬಿ ಪಿಕ್ಚರ್‌ನಲ್ಲಿ ಅಮಿರ್ ಹೇಗೆಲ್ಲಾ ಕಾಣಿಸುತ್ತಾರೆ ಎಂದು ಹೇಳುವುದಕ್ಕೆ ಈ ಫೊಟೋ ಎಕ್ಸಾಪಲ್.. 


ಪಿಕೆ ನಂತ್ರ ಬಾಲಿವುಡ್ನ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್‍ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಂಗಲ್' ಡಿಸೆಬಂರ್ 16ಕ್ಕೆ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಅಮೀರ್ ಖಾನ್ ರ ದಂಗಾಲ್ ಸಿನಿಮಾ ಈಗಾಗ್ಲೇ ಸಾಕಷ್ಟು ಕುತೂಹಲವನ್ನ ಹುಟ್ಟುಹಾಕಿದೆ. ಅಮೀರ್ ಖಾನ್ ಸಿನಿಮಾ ಅದ್ರೆ ಎಕ್ಸ್ ಪೆಕ್ಟೇಷನ್ ಜಾಸ್ತಿ. ಇದೀಗ 'ದಂಗಲ್' ಸಿನಿಮಾದ ಬಿಡುಗಡೆಯ ಡೇಟ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಅಮಿರ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
 
ಈಗಾಗ್ಲೇ ಪ್ರತಿಯೊಂದು ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸ್ತಿರೋ ಅಮೀರ್ ಖಾನ್ ಈಗ ದಂಗಲ್ ನಲ್ಲೂ ಅದೇ ಎನರ್ಜಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಫಸ್ಟ್ ಲುಕ್ ಸಿನಿಮಾದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿಯನ್ನ ಜಾಸ್ತಿಮಾಡಿದೆ. 
 
ಕೆಲ ಮೂಲಗಳ ಪ್ರಕಾರ 2016 ಡಿಸೆಂಬರ್ 23ಕ್ಕೆ ಚಿತ್ರ ಮಾಡಲಾಗುವುದು ಎಂದು ಹೇಳಲಾಗ್ತಿತ್ತು. ಆದ್ರೆ ಅಮಿರ್ ಪ್ಲ್ಯಾನ್ ಪ್ರಕಾರ 'ದಂಗಲ್' ಚಿತ್ರ ಡಿಸೆಂಬರ್ 23ಕ್ಕೆ ಬದಲಾಗಿ 16ಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿದೆಯಂತೆ. 
 
ಇದಷ್ಟೇ ಅಲ್ಲ ಇದಕ್ಕೂ ಮೊದಲು 'ದಂಗಲ್' ಚಿತ್ರ 2017ರಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಲಾಗ್ತಿತ್ತು. ಇನ್ನೂ ಅಧಿಕತವಾಗಿ ಚಿತ್ರ ರಿಲೀಸ್ ಬಗ್ಗೆ ತಿಳಿದು ಬಂದಿಲ್ಲ. 
 
ಚಿತ್ರವು ಕುಸ್ತಿಪಟು ಮಹಾವೀರ್‌ ಸಿಂಗ್‌ ಪೋಗಟ್‌ ಅವರ ಜೀವನ ಆಧಾರಿತ ಕತೆಯಾಗಿದೆ. ಮಹಾವೀರ್‌ ತಮ್ಮ ಮಕ್ಕಳಾದ ಗೀತಾ ಪೋಗಟ್‌ ಮತ್ತು ಬಬಿತಾ ಕುಮಾರಿ ಅವರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಾವೇ ಕೋಚ್ ಆಗಿದ್ರು.
 
ಕುಸ್ತಿ ಪಟುವಿನ ದೇಹಕ್ಕಾಗಿ ಅಮೀರ್ ಈಗಾಗ್ಲೇ ವರ್ಕ್ ಔಟ್ ಮಾಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಮೀರ್, ಕಿರಣ್ ರಾವ್, ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅಮಿರ್ ಖಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಡಿಸೆಂಬರ್ ವರೆಗೂ ಕಾಯಲೇಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ